×
Ad

ಪೆರ್ಡೂರಿನ ರಾಮ ಕುಲಾಲ್‌ಗೆ ಭಾರತ್ ಗೌರವ ಪ್ರಶಸ್ತಿ

Update: 2016-11-14 00:25 IST

ಉಡುಪಿ, ನ.13: ಹೊಸದಿಲ್ಲಿಯ ಸಿಟಿಜನ್ ಇಂಟಿಗ್ರೇಷನ್ ಪೀಸ್ ಸೊಸೈಟಿ ವತಿಯಿಂದ ನೀಡುವ ಭಾರತ್ ಗೌರವ ರಾಷ್ಟ್ರೀಯ ಪ್ರಶಸ್ತಿಗೆ ಪೆರ್ಡೂರಿನ ಸಮಾಜ ಸೇವಕ, ಸಂಘಟಕ ಪೆರ್ಡೂರು ರಾಮ ಕುಲಾಲ್ ಆಯ್ಕೆಯಾಗಿದ್ದಾರೆ.

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ 85ನೆ ಜನ್ಮದಿನಾಚರಣೆಯ ಸಂದರ್ಭ ನ.20ರಂದು ಹೊಸದಿಲ್ಲಿಯ ಇಂಡಿಯಾ ಇಂಟರ್ ನ್ಯಾಶನಲ್ ಸೆಂಟರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸುಮಾರು 40 ವರ್ಷಗಳಿಂದ ಸಮಾಜ ಸೇವೆ, ಸಂಘಟನೆ, ಶೋಷಿತರ ಪರ ಹೋರಾಟದ ಮೂಲಕ ಜನಪರವಾಗಿ ರಾಮ ಕುಲಾಲ್ ಗುರುತಿಸಿಕೊಂಡಿದ್ದಾರೆ. ಪೆರ್ಡೂರು ಗ್ರಾಪಂ ಸದಸ್ಯರಾಗಿ, ಉಡುಪಿ ತಾಪಂ ಸದಸ್ಯರಾಗಿ ಬಳಿಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕುಲಾಲ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News