ಫರಂಗಿಪೇಟೆಯಲ್ಲಿ ಕುರ್‌ಆನ್ ಸಂದೇಶ, ಪ್ರದರ್ಶನ ಮತ್ತು ವಿವರಣೆ
ಫರಂಗಿಪೇಟೆ, ನ.14: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಹಮ್ಮಿಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಕುರ್‌ಆನ್ ಸಂದೇಶ, ಪ್ರದರ್ಶನ ಮತ್ತು ಮುಸ್ಲಿಮೇತರರಿಗೆ ಉಚಿತ ಕುರ್‌ಆನ್ ವಿತರಣೆ ಕಾರ್ಯಕ್ರಮವು ಫರಂಗಿಪೇಟೆಯ ಮಸ್ಜಿದ್ ಬಿರ್ರುಲ್ ವಾಲಿದೈನಿಯ ಸಬಾಂಗಣದಲ್ಲಿ ರವಿವಾರ ನಡೆಯಿತು.
ಕುರ್‌ಆನ್ ಸಂದೇಶ ಅಭಿಯಾನವನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಉದ್ಘಾಟಿಸಿದರು. ಎಸ್ಕೆಎಸ್‌ಎಂ ಜೊತೆ ಕಾರ್ಯದರ್ಶಿ ಎಂ.ಜಿ.ಮುಹಮ್ಮದ್‌ಕುರ್‌ಆನ್ ಸಂದೇಶ ಮತ್ತು ಮನುಷ್ಯ ದೇಹದಲ್ಲಿನ ಅದ್ಭುತಗಳ ಬಗ್ಗೆ ವಿವರಣೆ ನೀಡಿದರು.
ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಎಸ್ಕೆಎಸ್‌ಎಂ ಉಪಾಧ್ಯಕ್ಷ ಅಬೂಬಕರ್ ಪಾಂಡೇಶ್ವರ, ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ಎಸ್ಕೆಎಸ್‌ಎಂ ದಅ್ವಾ ಕಾರ್ಯದರ್ಶಿ ಜಬ್ಬಾರ್ ಮಾರಿಪಳ್ಳ, ಪುದು ಗ್ರಾಪಂ ಉಪಾಧ್ಯಕ್ಷ ಹಾಶಿರ್, ಸದಸ್ಯ ರಮ್ಲಾನ್, ಎಸ್ಕೆಎಸ್‌ಎಂ ಯೂತ್ ವಿಂಗ್‌ನ ಮೂಸ ಫಾಝಿಲ್ ಕುದ್ರೋಳಿ, ಶಾಹೀದ್ ಮುಲ್ಕಿ, ಮುಝಕ್ಕಿರ್ ಉಪಸ್ಥಿತರಿದ್ದರು.
ಶರೀಫ್ ಮುಲ್ಕಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇಂಝಾಮ್ ಮತ್ತು ಮುಝಮ್ಮಿಲ್ ಕಿರಾಅತ್ ಪಠಿಸಿದರು.