×
Ad

ಚಿತ್ರರಂಗದಲ್ಲಿದ್ದು 56 ವರ್ಷಗಳ ಬಳಿಕ ಜಾಕಿ ಚಾನ್‌ಗೊಲಿದ ಆಸ್ಕರ್ ಪ್ರಶಸ್ತಿ

Update: 2016-11-14 14:32 IST

ಲಾಸ್ ಏಂಜಲ್ಸ್,ನ.14: ತನ್ನ 56 ವರ್ಷಗಳ ವೃತ್ತಿಜೀವನದಲ್ಲಿ 200ಕ್ಕೂ ಅಧಿಕ ಹಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಮೇರುನಟ ಜಾಕಿ ಚಾನ್ ಅವರಿಗೆ ಕೊನೆಗೂ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಒಲಿದಿದೆ.

ಶನಿವಾರ ರಾತ್ರಿ ಲಾಸ್ ಏಂಜಲ್ಸ್‌ನ ಹಾಲಿವುಡ್ ಆ್ಯಂಡ್ ಹೈಲ್ಯಾಂಡ್ ಸೆಂಟರ್ ನಲ್ಲಿ ನಡೆದ ಎಂಟನೇ ಆ್ಯನ್ಯುವಲ್ ಗವರ್ನರ್ಸ್ ಪ್ರಶಸ್ತಿ ಪ್ರದಾನದ ವರ್ಣರಂಜಿತ ಸಮಾರಂಭದಲ್ಲಿ ಟಾಮ್ ಹ್ಯಾಂಕ್ಸ್,ಮಿಶೆಲ್ಲಿ ಯೆಹೋವ್ ಮತ್ತು ಕ್ರಿಸ್ ಟಕರ್ ಅವರು 62ರ ಹರೆಯದ ಚಾನ್ ಅವರಿಗೆ ಗೌರವ ಆಸ್ಕರ್ ಪ್ರಶಸ್ತಿಯನ್ನು ಪ್ರದಾನಿಸಿದರು.

ಆಸ್ಕರ್ ಪ್ರಶಸ್ತಿಯನ್ನು ತನ್ನ ‘ಕನಸು’ಎಂದು ಬಣ್ಣಿಸಿದ ಚಾನ್ ತನ್ನ ಹೆತ್ತವರೊಂದಿಗೆ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ನೋಡುತ್ತಲೇ ತಾನು ಬೆಳೆದಿದ್ದೆ ಎಂದು ನೆನಪುಗಳನ್ನು ಹಂಚಿಕೊಂಡರು.

 23 ವರ್ಷಗಳ ಹಿಂದೆ ನಟ ಸಿಲ್ವೆಸ್ಟರ್ ಸ್ಟಾಲೋನ್ ನಿವಾಸಕ್ಕೆ ಭೇಟಿ ನೀಡಿದ್ದಾಗ ಆಸ್ಕರ್ ಪ್ರಶಸ್ತಿಯನ್ನು  ಕಂಡು ಪುಳಕಿತನಾಗಿದ್ದೆ. ಅದನ್ನು ಮೃದುವಾಗಿ ಸ್ಪರ್ಶಿಸಿ ಮುತ್ತಿಟ್ಟಿದ್ದೆ. ನಿಜಕ್ಕೂ ನನಗೂ ಒಂದು ಆಸ್ಕರ್ ಪ್ರಶಸ್ತಿ ಬೇಕು ಎಂದು ನನ್ನಲ್ಲೇ ಹೇಳಿಕೊಂಡಿದ್ದೆ ಎಂದ ಅವರು, ನಾನು ಚೀನಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ನನಗೆ ಇಷ್ಟೆಲ್ಲ ವರ್ಷ ಅಷ್ಟೆಲ್ಲ ವಿಷಯಗಳನ್ನು ತಿಳಿಸಿಕೊಟ್ಟ, ಕೊಂಚ ಪ್ರಸಿದ್ಧಿಗೂ ಪಾತ್ರನಾಗುವಂತೆ ಮಾಡಿದ ಹಾಲಿವುಡ್‌ಗೆ ವಂದನೆಗಳು ಎಂದು ಭಾವುಕರಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News