ಬಂಟ್ವಾಳ: ಎಪಿಎಂಸಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
Update: 2016-11-14 18:39 IST
ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಡಿ.4 ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಸಂಗಬೆಟ್ಟು ವಸಂತ ಅಣ್ಣಳಿಕೆ(ಸಾಮಾನ್ಯ), ಚೆನ್ನೈತ್ತೋಡಿ ಮಲ್ಲಿಕಾಶೆಟ್ಟಿ (ಮಹಿಳೆ), ಅಮ್ಟಾಡಿ ರಮೇಶ್ ಪೂಜಾರಿ (ಹಿ.ವ.ಎ.), ಕಾವಳಮೂಡೂರು ಕೆ.ಹರೀಶ್ಚಂದ್ರ ಪೂಜಾರಿ (ಸಾಮಾನ್ಯ), ಕೊಳ್ನಾಡು ಯೋಗೇಶ್ ಆಳ್ವ (ಹಿ.ವ.ಬಿ.), ಅಳಿಕೆ ಗೀತಾ ಟಿ.ಶೆಟ್ಟಿ (ಮಹಿಳೆ), ಕೆದಿಲ ಜಗದೀಶ(ಅನುಸೂಚಿತ ಪಂ.), ಮಾಣಿ ನೇಮಿರಾಜ್ ರೈ (ಸಾಮಾನ್ಯ), ಚೆನ್ನಪ್ಪ ಕೊಟ್ಯಾನ್(ಸಾಮಾನ್ಯ), ಪಾಣೆಮಂಗಳೂರು ಅರವಿಂದ ಭಟ್(ಸಾಮಾನ್ಯ), ವಿಠಲ ಸಾಲಿಯಾನ್ (ಅನುಸೂಚಿತ ಜಾತಿ), ವರ್ತಕರ ಕ್ಷೇತ್ರ ಬಾಲಕೃಷ್ಣ ಆಳ್ವ.
ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿಯೂ ಬಂಟ್ವಾಳ ಎಪಿಎಂಸಿ ಬಿಜೆಪಿ ಬೆಂಬಲಿತರ ಪಾಲಾಗಲಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.