×
Ad

ನಗದಿಲ್ಲದೆ ನಗದ ಗ್ರಾಮೀಣ ಭಾರತ!

Update: 2016-11-14 19:11 IST

ಪಚ್ಗಾಂವ್(ಹರ್ಯಾಣ), ನ.14: ಕಪ್ಪು ಹಣವನ್ನು ಮಟ್ಟ ಹಾಕಲು ರೂ. 500 ಹಾಗೂ 1000ದ ನೋಟು ರದ್ದತಿಯ ಸರಕಾರದ ನಿರ್ಧಾರದಿಂದ ನಗದಿನ ಮೂಲಕವೇ ಹೆಚ್ಚು ವ್ಯವಹಾರ ನಡೆಯುವ ಗ್ರಾಮೀಣ ಭಾರತದ ಜನರಿಗೆ ಅತ್ಯಂತ ಬಾಧೆಯಾಗಿದೆ. ಅವರಲ್ಲಿ ಕೆಲವರಿಗೆ ಬ್ಯಾಂಕ್ ಖಾತೆಯೂ ಇಲ್ಲ. ದೈನಂದಿನ ಅಗತ್ಯ ಪೂರೈಸಿಕೊಳ್ಳಲು ನಗದಿ ಹಣ ಪಡೆಯುವುದಕ್ಕಾಗಿ ಅವರು ಹೆಣಗಾಡಬೇಕಾಗಿ ಬಂದಿದೆ.

ರಾಷ್ಟ್ರ ರಾಜಧಾನಿಯಿಂದ ಕೇವಲ 2 ತಾಸು ದೂರದ, ಹರ್ಯಾಣದ ಪಚ್ಗಾಂವ್‌ನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ 18ರ ಹರೆಯದ ರಿಂಕು ಯಾದವ್‌ನಿಗೆ ಬ್ಯಾಂಕ್ ಖಾತೆಯಿಲ್ಲ. ತನ್ನೆಲ್ಲ ವ್ಯವಹಾರ ನಗದಿನಿಂದಲೇ ನಡೆಯುವುದರಿಂದ ಬ್ಯಾಂಕ್ ಖಾತೆ ತೆರೆದಿಲ್ಲ. ಆದರೆ, ನಗದು ಹಣ ಇಲ್ಲದೆ ತಾನು ಊಟ ಮಾಡುವುದಾದರೂ ಹೇಗೆ ಎಂದಾತ ಪ್ರಶ್ನಿಸಿದ್ದಾನೆ.

ತಮ್ಮ ಗ್ರಾಮಗಳಲ್ಲಿ ಸುಮಾರು 35 ಸಾವಿರ ಜನರಿದ್ದು, 4 ಬ್ಯಾಂಕುಗಳು ಹಾಗೂ 4 ಎಟಿಎಂಗಳಿವೆ. ಎಟಿಎಂಗಳೆಲ್ಲ ಮುಚ್ಚಿದ್ದರೆ, ಬ್ಯಾಂಕುಗಳಿಗೆ ದಿನಕ್ಕೆ ಕೇವಲ 2-5 ಲಕ್ಷ ಮಾತ್ರ ಬರುತ್ತಿದೆ. ಇತರ ನಗರಗಳಿಗೆ ಹೋಲಿಸಿದರೆ ಪಚ್ಗಾಂವ್‌ನ ಬ್ಯಾಂಕ್‌ಗಳಿಗೆ ಬರುವ ಹಣ ತೀರಾ ಕಡಿಮೆ. ಪ್ರತಿ ಬ್ಯಾಂಕ್‌ಗೆ ಕನಿಷ್ಠ 20ರಿಂದ 30 ಲಕ್ಷ ರೂ.ಗಳಾದರೂ ಬರಬೇಕು. ಆದರೆ, ಇಲ್ಲಿನ ಹರ್ಯಾಣ ಗ್ರಾಮೀಣ ಬ್ಯಾಂಕ್‌ಗೆ ಕೇವಲ 2 ಲಕ್ಷ ಬರುತ್ತದೆ. ಅದು ತಲಾ 10 ಅಥವಾ 5 ಸಾವಿರದಂತೆ 20-30 ಮಂದಿ ಪಡೆದರೆ ಮುಗಿಯುತ್ತದೆಂದು ಸರಪಂಚ ಕ್ಯಾಪ್ಟನ್ ಸುಬೆ ಸಿಂಗ್ ವಿವರಿಸಿದ್ದಾರೆ.

ತಮಗೆ ನಿನ್ನೆ ರೂ. 5 ಲಕ್ಷ ಹಾಗೂ ಇಂದು ರೂ. 2 ಲಕ್ಷ ಬಂದಿದೆ. ಅಗತ್ಯಕ್ಕೆ ತಕ್ಕಷ್ಟು ನಗದು ಪೂರೈಕೆಯಿಲ್ಲ. ತಮಗೆ ಹೆಚ್ಚು ಹಣ ಅಗತ್ಯವಿದೆಯೆಂದು ಬ್ಯಾಂಕ್‌ನ ಮ್ಯಾನೇಜರ್ ಅರುಣ್ ಯಾದವ್ ಒಪ್ಪಿಕೊಳ್ಳುತ್ತಾರೆ.

ತಮಗೆ ರಸಗೊಬ್ಬರದ ಅಂಗಡಿಯಿದೆ. ತಮಗೆ ಪರಿಚಯದ ಜಮೀನ್ದಾರರು ಬಂದರೆ ಸಾಲ ಕೊಡುತ್ತೇವೆಂದು ಅಶೋಕ್ ಕುಮಾರ್ ಎಂಬವರು ತಿಳಿಸಿದ್ದಾರೆ. ಆದರೆ, ಅಂಗಡಿಕಾರರಿಗೆ ಪರಿಚಯವಿಲ್ಲದ ರೈತರಿಗೆ ದಿನವಹಿ ವ್ಯವಹಾರಕ್ಕೆ ನಗದಿನ ಏರ್ಪಾಟು ಮಾಡಿಕೊಳ್ಳದೆ ಬೇರೆ ದಾರಿಯಿರುವುದಿಲ್ಲ. ಇಲ್ಲಿ ಒಂದು 4-5 ಮಂದಿಯಲ್ಲಿ ಕ್ರೆಡಿಟ್ ಕಾರ್ಡ್‌ಗಳಿದ್ದರೂ, ಉಪಯೋಗಿಸುವ ಸೌಲಭ್ಯವಿಲ್ಲ. ಹಣವಿಲ್ಲದೆ ಬದುಕುವುದು ಹೇಗೆಂದು ಹವಾಲ್ದಾರ್ ರಾಜಾ ರಾವತ್ ಎಂಬ್ರು ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News