ಸುರತ್ಕಲ್: ಹೊಟೇಲಿನಲ್ಲಿ ಯುವಕನಿಗೆ ಹಲ್ಲೆ
Update: 2016-11-14 21:03 IST
ಮಂಗಳೂರು, ನ.14: ಸುರತ್ಕಲ್ ಎನ್‌ಐಟಿಕೆ ಬಳಿಯ ಡಾಬಾದಲ್ಲಿ ಗ್ರಾಹಕ ಕಾರ್ತಿಕ್ ಎಂಬವರಿಗೆ ಅಪರಿಚಿತ ನಾಲ್ಕು ಮಂದಿ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಕಾರ್ತಿಕ್ ತನ್ನ ಸ್ನೇಹಿತ ಯಶವಂತ್ ಜೊತೆ ಊಟ ಮಾಡಿದ ಬಳಿಕ ಸಪ್ಲೈಯರ್ ಬಳಿ ಟಿಶ್ಯೂ ಪೇಪರ್ ಕೇಳಿದಾಗ, ಪಕ್ಕದ ಟೇಬಲ್‌ನಲ್ಲಿದ್ದ ನಾಲ್ಕು ಮಂದಿ ಅಪರಿಚಿತರು ದುರುಗಟ್ಟಿ ನೋಡುವುದು ಯಾಕೆ ಎಂದು ಕೇಳಿ ಸ್ಟೀಲ್ ಜಗ್ಗ್‌ನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಡಾಬಾದ ಮಾಲಕ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.