×
Ad

ಮಹಿಳಾ ಯುದ್ಧವಿಮಾನ ಪೈಲಟ್ ಅವಘಡಕ್ಕೆ ಬಲಿ

Update: 2016-11-15 00:16 IST


ಬೀಜಿಂಗ್,ನ.14: ಚೀನಾದ ಜೆ-10 ಸಮರವಿಮಾನದ ಹಾರಾಟ ನಡೆಸಲಿದ್ದ ಪ್ರಪ್ರಥಮ ಮಹಿಳಾ ಪೈಲಟ್ ಒಬ್ಬರು, ವಿಮಾನಹಾರಾಟ ತರಬೇತಿಯ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಸಾವನ್ನಪ್ಪಿದ್ದಾರೆಂದು, ಸರಕಾರಿ ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.
  ಚೀನಾ ವಾಯುಪಡೆಯ ‘ಆಗಸ್ಟ್ 1’ ವೈಮಾನಿಕ ಕಸರತ್ತು (ಏರೋಬ್ಯಾಟಿಕ್) ಪ್ರದರ್ಶನ ತಂಡದ ಸದಸ್ಯೆಯಾದ 30ರ ಹರೆಯದ ಯು ಕ್ಸು, ಕಳೆದ ಶನಿವಾರ ಉತ್ತರ ಹೆಬೆಯಿ ಪ್ರಾಂತದಲ್ಲಿ ವೈಮಾನಿಕ ಹಾರಾಟ ತರಬೇತಿಯಲ್ಲಿ ತೊಡಗಿದ್ದಾಗ ವಿಮಾನದಿಂದ ಹೊರಗೆಸೆಯಲ್ಪಟ್ಟರೆಂದು ಚೀನಾ ಡೈಲಿ ಪತ್ರಿಕೆ ತಿಳಿಸಿದೆ. ಅವರು ಪಕ್ಕದಲ್ಲೇ ಹಾರಾಡುತ್ತಿದ್ದ ಇನ್ನೊಂದು ವಿಮಾನದ ರೆಕ್ಕೆಗೆ ತಾಗಿದ್ದರಿಂದ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ಜೊತೆಗಿದ್ದ ಸಹ ಪೈಲಟ್ ವಿಮಾನದಿಂದ ಹೊರದೂಡಲ್ಪಟ್ಟರೂ, ಸುರಕ್ಷಿತವಾಗಿ ಭೂಸ್ಪರ್ಶ ಮಾಡಿ ಬದುಕುಳಿದರೆಂದು ವರದಿಗಳು ತಿಳಿಸಿವೆ.‘‘ಮೃತ ಮಹಿಳಾ ಪೈಲಟ್ ವು ಕ್ಸು ಪ್ರಸ್ತುತ ಚೀನಾದಲ್ಲಿ ಸಮರವಿಮಾನಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿರುವ ನಾಲ್ವರು ಮಹಿಳಾ ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು. ಆಕೆಯ ಸಾವು ಚೀನಾದ ವಾಯುಪಡೆಗಾದ ದೊಡ್ಡ ನಷ್ಟ’’ ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News