×
Ad

ಅಹಿತಕರ ಘಟನೆಗಳಿಗೆ ಮಾನವ್ ಸಮಾನತಾ ಮಂಚ್ ಖಂಡನೆ

Update: 2016-11-15 10:02 IST

ಮಂಗಳೂರು, ನ.15: ನಗರದಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಇರಿತ ಹಾಗೂ ಕೊಲೆಯತ್ನದ ಘಟನೆಗಳು ಮತ್ತು ಮೈಸೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯ ಕೊಲೆ ಕೃತ್ಯವನ್ನು ಮಾನವ್ ಸಮಾನತಾ ಮಂಚ್ ಖಂಡಿಸಿದೆ.
ಹಾಡುಹಗಲೇ ಇರಿತ ಮತ್ತು ಕೊಲೆಯತ್ನಗಳು ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಜಿಲ್ಲಾಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಲು ಸೂಕ್ತ ಕ್ರಮ ಜರಗಿಸಬೇಕು ಎಂದು ಮಾನವ್ ಸಮಾನತಾ ಮಂಚ್‌ನ ಪದಾಧಿಕಾರಿಗಳಾದ ಅಲಿ ಹಸನ್, ರೋಶನ್ ಪತ್ರಾವೋ, ವಸಂತ್ ಟೈಲರ್, ಮುಹಮ್ಮದ್ ಸಾಲಿ, ಪುರುಷೋತ್ತಮ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News