×
Ad

ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 42ಪೈಸೆ ಕುಸಿತ

Update: 2016-11-15 11:36 IST

ಮುಂಬೈ , ನ.15: ಅಮೆರಿಕ  ಡಾಲರ್ ಮುಂದೆ ರೂಪಾಯಿ ಮೌಲ್ಯ 42ಪೈಸೆ ಕುಸಿದಿದೆ. 
ಬೆಳಗ್ಗೆ ಪ್ರಾರಂಭವಾದ ವಹಿವಾಟಿನಲ್ಲಿ ಪ್ರತಿ ಡಾಲರ್ ಗೆ ಬೆಳಗ್ಗೆ 67.25ರಷ್ಟಿದ್ದ ರೂಪಾಯಿ ಮೌಲ್ಯ ಧಿಡೀರನೆ 42ಪೈಸೆ ಕುಸಿಯಿತು
ಡೊನಾಲ್ಡ್ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಅನಿರೀಕ್ಷತವಾಗಿ ಆಯ್ಕೆಗೊಂಡ ಬಳಿಕ ರೂಪಾಯಿ ಮೌಲ್ಯ ಕುಸಿತದ ಹಾದಿ ಹಿಡಿದಿದೆ..
ಕಳೆದ ಶುಕ್ರವಾರ ರೂಪಾಯಿ ಮೌಲ್ಯ62 ಪೈಸೆ ಕುಸಿದಿತ್ತು. ಇದು ಮೂರು ತಿಂಗಳಲ್ಲಿ ಅತ್ಯಂತ ಕಡಿಮೆಯಾಗಿತ್ತು.ಯುಎಸ್ ಡಾಲರ್‌ ಮೌಲ್ಯ 67.25 ರೂ. ಇತ್ತು. ಫೋರೆಕ್ಸ್ ಮಾರುಕಟ್ಟೆ ಸೋಮವಾರ ಗುರುನಾನಕ್‌ ಜಯಂತಿಯ ಹಿನ್ನೆಲೆಯಲ್ಲಿ ಬಂದ್ ಆಗಿತ್ತು.
ಇದೇ ವೇಳೆ ಬಿ.ಎಸ್.ಇ ಸೆನ್ಸೆಕ್ಸ್ ಅಂಕಗಳೂ ಸಹ 344.27ರಷ್ಟು ಕುಸಿದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News