×
Ad

ಬ್ಯಾಂಕ್ ಗೆ ಬಂದು ನೋಟು ಬದಲಿಸಿಕೊಂಡ ಪ್ರಧಾನಿಯ ತಾಯಿ

Update: 2016-11-15 12:29 IST

ಅಹ್ಮದಾಬಾದ್ , ನ. 15 : ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಹೀರಾಬೆನ್ ಮೋದಿ ಅವರು ತಮ್ಮ ಹಳೇನೋಟುಗಳನ್ನು ಬದಲಾಯಿಸಿ ಹೊಸ ನೋಟು ಪಡೆಯಲು ಖುದ್ದಾಗಿ ಇಲ್ಲಿನ ಗಾಂಧೀ ನಗರದಲ್ಲಿರುವ ಬ್ಯಾಂಕ್ ಗೆ ಮಂಗಳವಾರ ಹೋಗಿದ್ದಾರೆ. 4500 ರೂ ಹಳೇನೋಟುಗಳನ್ನು ಹಿಡಿದುಕೊಂಡು ಹೀರಾಬೆನ್ ಅವರು ಗಾಂಧಿ ನಗರದ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ ತಲುಪಿದರು. ಅವರಿಗೆ 10-10 ನೋಟುಗಳ ಎರಡು ಕಟ್ಟುಗಳನ್ನು ಹಾಗು 500 ರೂ ನ ಹಾಗು 2000 ರೂ. ಯ ತಲಾ  ಒಂದು ಹೊಸ ನೋಟುಗಳನ್ನು ನೀಡಲಾಯಿತು. 

ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲದ ಹೀರಾಬೆನ್ ಅವರನ್ನು ಕೆಲವರು ಕೈಹಿಡಿದು ಒಳಗೆ ಕರೆದುಕೊಂಡು ಬಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News