ಪ್ರಧಾನಿ ತಾಯಿಗೂ ಮುಟ್ಟಿದ ನೋಟು ಬಿಸಿ ... !
Update: 2016-11-15 12:53 IST
ಗಾಂಧಿನಗರ, ನ.15: ಕೇಂದ್ರ ಸರಕಾರ ಜಾರಿಗೊಳಿಸಿರುವ ನೋಟು ಬದಲಾವಣೆ ಬಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿಗೂ ತಟ್ಟಿದೆ.
ಮೋದಿ ಅವರ ತಾಯಿ 95ರ ಹರೆಯದ ಹೀರಾಬೆನ್ ಗುಜರಾತ್ ನ ಗಾಂಧಿ ನಗರದಲ್ಲಿರುವ ಬ್ಯಾಂಕೊಂದಕ್ಕೆ ಇಂದು ತೆರಳಿ ನಿಷೇಧಿತ ಐನೂರ 4 ನೋಟುಗಳನ್ನು ನೀಡಿ 2 ಸಾವಿರ ರೂಪಾಯಿಯ ಹೊಸ ನೋಟುಗಳನ್ನು ಪಡೆದರು.
ನೋಟುಗಳ ಬದಲಾವಣೆಗೆ ವೀಲ್‌ಚೆಯರ್ ನಲ್ಲಿ ಆಗಮಿಸಿದ್ದ ಹೀರಾಬೆನ್ ಬ್ಯಾಂಕ್ ತಲುಪುತ್ತಿದ್ದಂತೆ ನಡೆದುಕೊಂಡು ಹೋಗಿ ಸರತಿಯ ಸಾಲಿನಲ್ಲಿ ನಿಂತುಕೊಂಡು ಎಲ್ಲರಂತೆ ಅಗತ್ಯದ ಫಾರಂಗೆ ಸಹಿ ಹಾಕಿ ನೋಟು ಬದಲಾಯಿಸಿಕೊಂಡರು.