ಬೆಳ್ತಂಗಡಿಯಲ್ಲಿ ಹಣಕ್ಕಾಗಿ ಮುಂದುವರಿದ ಜನರ ಪರದಾಟ!
Update: 2016-11-15 13:23 IST
ಬೆಳ್ತಂಗಡಿ, ನ.15: 1000, 500 ರೂ. ನೋಟುಗಳು ಅಮಾನ್ಯಗೊಂಡಿರುವುದರಿಂದ ಹಣಕ್ಕಾಗಿ ಜನರ ಪರದಾಟ ಇಂದೂ ಮುಂದುವರಿದಿದೆ.
ಬೆಳ್ತಂಗಡಿಯಲ್ಲಿ ಹಣಕ್ಕಾಗಿ ಬ್ಯಾಂಕ್ ಗಳ ಮುಂದೆ ಉರಿ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಜನರದ್ದಾಗುತ್ತಿದೆ. ಎಟಿಎಂಗಳ ಮುಂದೆ ಹಣವಿಲ್ಲ ಎಂಬ ಬೋರ್ಡ್ ಗಳನ್ನು ನೇತು ಹಾಕಲಾಗಿದೆ.