ಅರಫಾ ಮಂಚಿಯವರ ‘ಪ್ರತಿರೋಧ ಇಸ್ಲಾಮಿನಲ್ಲಿ’ ಪುಸ್ತಕ ಬಿಡುಗಡೆ
Update: 2016-11-15 13:29 IST
ಮಂಗಳೂರು, ನ.15: ಸನ್ಮಾರ್ಗ ವಾರಪತ್ರಿಕೆಯ ಉಪಸಂಪಾದಕ ಹಾಗೂ ಲೇಖಕ ಅರಫಾ ಮಂಚಿಯವರು ಬರೆದಿರುವ ‘ಪ್ರತಿರೋಧ ಇಸ್ಲಾಮಿನಲ್ಲಿ’ ಎಂಬ ಪುಸ್ತಕವನ್ನು ಕೇರಳ ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ವಿ.ಟಿ.ಅಬ್ದುಲ್ಲಾ ಕೋಯ ತಂಙಳ್ ಬಿಡುಗೊಳಿಸಿದರು.
ಉಪ್ಪಿನಂಗಡಿಯ ಹೆಚ್.ಎಂ. ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆದ ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಮಾವೇಶದಲ್ಲಿ ಅವರು ಬಿಡುಗಡೆಗೊಳಿಸಿದರು.
ಬಹುಸಂಸ್ಕೃತಿಯ ಸಮಾಜದಲ್ಲಿ ಇಸ್ಲಾಮೀ ಮೇರೆಯೊಳಗಿದ್ದು ಹೇಗೆ ಇವುಗಳನ್ನು ಪ್ರತಿರೋಧಿಸಬೇಕು ಹಾಗೂ ಇಸ್ಲಾಮನ್ನು ಹೇಗೆ ಪ್ರತಿನಿಧಿಸಬೇಕು ಎಂಬುವುದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಾಗಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ ಎಂದು ಅಮನ್ ಪ್ರಕಾಶನ ಸಂಸ್ಥೆ ತಿಳಿಸಿದೆ.