×
Ad

ಭಾರತದೊಂದಿಗೆ ಇರುವ ಸೌಹಾರ್ದ ಸಂಬಂಧವನ್ನು ಮುಚ್ಚಿಡುವುದಿಲ್ಲ: ಇಸ್ರೇಲ್ ಅಧ್ಯಕ್ಷ

Update: 2016-11-15 14:25 IST

ಹೊಸದಿಲ್ಲಿ, ನ. 15: ಭಾರತ ಇಸ್ರೇಲ್ ನಡುವಿನ ಸಂಬಂಧ ಪರಸ್ಪರ ಮುಚ್ಚಿಡಬೇಕಾದ ಸಂಬಂಧವಲ್ಲ ಎಂದು ಇಸ್ರೇಲ್ ಅಧ್ಯಕ್ಷ ರಿ ಯೂವಿನ್ ರಿವ್ಲಿನ್ ಹೇಳಿದ್ದಾರೆಂದು ವರದಿಯಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಸಕಲ ಬೆಂಬಲವನ್ನು ನೀಡುವುದಾಗಿಯೂ ಎಂಟು ದಿವಸಗಳ ಭಾರತ ಸಂದರ್ಶನಕ್ಕಾಗಿ ಬಂದಿರುವ ರಿವ್ಲಿನ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಫೆಲೆಸ್ತೀನ್ ವಿಷಯದಲ್ಲಿ ಭಾರತದೊಂದಿಗೆ ಭಿನ್ನಾಭಿಪ್ರಾಯ ಇದ್ದಾಗಲೇ ಭಾರತ-ಇಸ್ರೇಲ್ ಸಂಬಂಧದಲ್ಲಿ ಬೆಳವಣಿಗೆ ಹೇಗಾಯಿತು ಎಂದು ಅವರು ಬೆಟ್ಟು ಮಾಡಿದ್ದಾರೆ. ರಿವ್ಲಿನ್ ಪ್ರಧಾನಿ ನರೇಂದ್ರಮೋದಿ ಮತ್ತು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್‌ರೊಂದಿಗೆ ಚರ್ಚೆ ನಡೆಸಲಿದ್ದಾರೆ. ಭಾರತ ಮತ್ತು ಇಸ್ರೇಲ್ ಸಹಕರಿಸುವ ಯೋಜನೆಗಳಿಗೆ ರಿವ್ಲಿನ್ ಸಂದರ್ಶನ ನೀಡಲಿದ್ದಾರೆ. 2008ರಲ್ಲಿ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಮೃತರಾದವರಿಗೆ ಶ್ರದ್ದಾಂಜಲಿಯನ್ನು ರಿವ್ಲಿನ್ ಅರ್ಪಿಸಲಿದ್ದಾರೆ. ಯಹೂದಿ ಸಮುದಾಯದ ನಾಯಕರನ್ನು ಕೂಡಾ ಅವರು ಭೇಟಿಯಾಗಲಿದ್ದಾರೆ. ಎರಡು ಶತಮಾನಗಳ ಬಳಿಕ ಇಸ್ರೇಲ್ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News