ಅತ್ಯಾಚಾರ ಸಂತ್ರಸ್ತೆಯ ಕನಸಿನ ಸಾಕ್ಷ್ಯದ ಮೇಲೆ 28 ವರ್ಷ ಜೈಲಿನಲ್ಲಿ ಕೊಳೆದ ವ್ಯಕ್ತಿ !

Update: 2016-11-15 10:02 GMT

ಡೆನ್ವರ್,ನ.15 :ಅತ್ಯಾಚಾರ ಸಂತ್ರಸ್ತೆಯೊಬ್ಬಳು ತನಗೆ ತನ್ನ ಅತ್ಯಾಚಾರಿಯ ಹೆಸರುಕನಸಿನಲ್ಲಿ ತಿಳಿದು ಬಂದಿತೆಂದು ಹೇಳಿದ ಕಾರಣಕ್ಕೆ ಬರೋಬ್ಬರಿ 28 ವರ್ಷ ಜೈಲು ಶಿಕ್ಷೆ ಅನುಭವಿಸಿದ ಡೆನ್ವರ್ ವ್ಯಕ್ತಿಯೊಬ್ಬನನ್ನು ನ್ಯಾಯಾಲಯ ಮರುವಿಚಾರಣೆ ವೇಳೆಗೆ ದೋಷಮುಕ್ತಗೊಳಿಸಿದೆ.

ಕ್ಲಾರೆನ್ಸ್ ಮೋಸೆಸ್-ಎಲ್ ಎಂಬ60 ವರ್ಷದ ವ್ಯಕ್ತಿಗೆ 1988 ರಲ್ಲಿ 48 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.ತನ್ನ ನೆರೆಯಾಕೆಯ ಮೇಲೆ ಲೈಂಗಿಕ ಹಲ್ಲೆಗೊಳಿಸಿದ ಆರೋಪ ಆತನ ಮೇಲಿತ್ತು. ಆದರೆ ತನ್ನನ್ನು ಆರೋಪಿಯೆಂದು ತಪ್ಪಾಗಿ ಗುರುತಿಸಲಾಗಿದೆ ಎಂದು ಆತ ಅವಲತ್ತುಗೊಂಡರೂ ಪ್ರಯೋಜನವಾಗಿರಲಿಲ್ಲ. ಆತನ ಮೇಲೆ ಹಲ್ಲೆ ಹಾಗೂ ಕಳ್ಳತನದ ಆರೋಪವೂ ಇತ್ತು.

ಆದರೆ 2012 ರಲ್ಲಿ ಇನ್ನೊಬ್ಬ ಕೈದಿ ಆತನಿಗೆ ಪತ್ರ ಬರೆದು ತಾನು ಆ ಮಹಿಳೆಯೊಂದಿಗೆ ಪರಸ್ಪರ ಸಮ್ಮತದೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದು ನಂತರ ಆಕೆಗೆ ಹೊಡೆದಿದ್ದಾಗಿಹೇಳಿಕೊಂಡಾಗ ಕ್ಲಾರೆನ್ಸ್ ಗೆ ಹೋದ ಜೀವ ಮರಳಿ ಬಂದಂತಾಗಿತ್ತು

ಕ್ಲಾರೆನ್ಸ್ ಪರ ವಕೀಲರು ಸಂತ್ರಸ್ತೆ ತನ್ನ ಹೇಳಿಕೆ ಬದಲಿಸುತ್ತಿರುವುದುಹಾಗೂಮೂವರು ಬೇರೆ ಬೇರೆ ವ್ಯಕ್ತಿಗಳನ್ನು ಆರಂಭದಲ್ಲಿ ಆರೋಪಿಗಳೆಂದು ಗುರುತಿಸಿದ್ದು ಕೊನೆಗೆ ಕ್ಲಾರೆನ್ಸ್ ಹೆಸರು ತನಗೆ ಕನಸಿನಿಂದ ತಿಳಿದು ಬಂದಿತ್ತೆಂದುಹೇಳಿರುವುದು ಕ್ಲಾರೆನ್ಸ್ ನಿರ್ದೋಷಿಯೆಂದು ಸಾಬೀತುಪಡಿಸುವಲ್ಲಿ ಸಫಲವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News