4.3 ಕೋಟಿಗೆ ಮೋದಿ ಸೂಟು ಖರೀದಿಸಿದ್ದ ಉದ್ಯಮಿ 6000 ಕೋಟಿ ಕಪ್ಪು ಹಣ ಸಲ್ಲಿಸಿಲ್ಲ !
ಹೊಸದಿಲ್ಲಿ, ನ. 14 : ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿ ಬಳಿಕ ಭಾರೀ ಚರ್ಚೆಗೊಳಗಾಗಿದ್ದ ಅವರ ಹೆಸರು ಬರೆದಿದ್ದ ದುಬಾರಿ ಸೂಟು ನೆನಪಿದೆಯೇ ? ಹಾಗಿದ್ದರೆ ದುಬಾರಿ ಸೂಟು ವಿವಾದಕ್ಕೆ ಒಳಗಾದ ಕೂಡಲೇ ಅದನ್ನು ಪ್ರಧಾನಿ ಹರಾಜು ಹಾಕಿದಾಗ 4.3 ಕೋಟಿ ರೂಪಾಯಿಗಳಿಗೆ ಅದನ್ನು ಖರೀದಿಸಿ ಗಿನ್ನೆಸ್ ರೆಕಾರ್ಡ್ ಗೆ ಸೇರಿದ್ದ ಆಭರಣ ಉದ್ಯಮಿ ಲಾಲ್ಜಿ ಭಾಯ್ ಪಟೇಲ್ ನಿಮಗೆ ನೆನಪಿರಲೇಬೇಕು.
500, 1000 ರೂ. ನೋಟುಗಳ ರದ್ದತಿ ಬಳಿಕ ಅನಧಿಕೃತ ಮೂಲಗಳ ಪ್ರಕಾರ ರದ್ದುಗೊಂಡ 500, 1000 ರೂ. ನೋಟುಗಳಲ್ಲಿ 6,000 ಕೋಟಿ ರೂಪಾಯಿ ಕಪ್ಪು ಹಣವನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ ಎಂದು ವರದಿಯಾಗಿತ್ತು. ಈಗ ಲಾಲ್ಜಿ ಅದನ್ನು ನಿರಾಕರಿಸಿದ್ದು ತಾನು ಅಷ್ಟು ದೊಡ್ಡ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ
ಅವರ ಸಂಸ್ಥೆ ಧರ್ಮಾನಂದನ್ ಡೈಮಂಡ್ಸ್ ಪ್ರೈ.ಲಿ. ಅನ್ನು ಸಂಪರ್ಕಿಸಿದಾಗ ಮಾಧ್ಯಮಗಳಿಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.