×
Ad

ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯ ವಾತಾವರಣ: ಜನಾರ್ದನ ಪೂಜಾರಿ

Update: 2016-11-15 17:07 IST

ಮಂಗಳೂರು,ನ.15: ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ವಾತಾವರಣ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ. ಈ ಅವ್ಯವಸ್ಥೆಗೆ ಏನು ಕಾರಣ ಎಂದು ಜನತೆಗೆ ಉತ್ತರ ನೀಡಲಿ ಎಂದು ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಸುದ್ದಿಗೊಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ಕಪ್ಪು ಹಣವನ್ನು ತಡೆಯಲು ದೇಶದ ಆದಾಯ ತೆರಿಗೆ ಕಾನೂನು ಇದೆ. ಸೆ276 ಎ ಮತ್ತು 276 ಬಿ ಯಲ್ಲಿ ದೇಶದಲ್ಲಿ ಕಪ್ಪು ಹಣವನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಬಹುದು ಎನ್ನುವ ಬಗ್ಗೆ ತಿಳಿಸಲಾಗಿದೆ. ಇದುವರೆಗೆ ಎಷ್ಟು ಜನರ ವಿರುದ್ಧ ಕಪ್ಪು ಹಣ ಇದೆ ಎಂದು ಪ್ರಕರಣ ದಾಖಲಿಸಲಾಗಿದೆ ? ಎಷ್ಟು ಜನರನ್ನು ಜೈಲಿಗೆ ಕಳುಹಿಸಲಾಗಿದೆ ? ಎನ್ನುವ ಪ್ರಶ್ನೆಗೆ ಮೋದಿ ಉತ್ತರಿಸಲಿ. ಪ್ರಸಕ್ತ ದೇಶದಲ್ಲಿ 1000 ಮತ್ತು 500 ರೂಗಳ ನೋಟನ್ನು ಸರಕಾರ ಅಮಾನ್ಯಗೊಳಿಸುವ ಸಂದರ್ಭದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಆದೇಶ ಮಾಡಿರುವುದರಿಂದ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸದೆ ಇರುವುದರಿಂದ ರೈತರು, ಕಾರ್ಮಿಕರು, ತರಕಾರಿ ವ್ಯಾಪಾರಿಗಳು ಜನಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಎಟಿಎಂ , ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲವಂತಾಗಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಮೋದಿಯವರು ಐವತ್ತು ದಿನ ಕಾಲಾವಕಾಶ ನೀಡಿ ಎಂದಿದ್ದಾರೆ ಆದರೆ 50 ದಿನಗಳಲ್ಲಿ ಈ ಅವ್ಯವಸ್ಥೆಯಿಂದ ಸಾಕಷ್ಟ ಜನರು ಬಲಿಯಾಗಬಹುದು.ಈ ಹಿನ್ನೆಲೆಯಲ್ಲಿ ಸರಕಾರ ತಕ್ಷಣ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು.ಮೋದಿಯವರನ್ನು ಸಂಸತ್‌ಗೆ ಆಯ್ಕೆ ಮಾಡಿದ ವಾರಣಾಸಿಯಲ್ಲಿ ಜನ 1000,500ರ ನೋಟನ್ನು ಜನರು ಗಂಗಾನದಿಗೆ ಎಸೆಯುತ್ತಿದ್ದಾರೆ ಏಕೆ ಎಂದು ಮೋದಿ ಆ ಜನರ ಬಳಿ ಕೇಳಬೇಕು .ಮೋದಿಯಿಂದಲೇ ಬಿಜೆಪಿ ದೇಶದಲ್ಲಿ ಸರ್ವನಾಶ ಹೊಂದಲಿದೆ.ಬಿಜೆಪಿ ಹೊರತಾಗಿ ದೇಶದ ಬಹುತೇಕ ಎಲ್ಲಾ ಪಕ್ಷಗಳು ನೋಟಿನ ಅಮಾನ್ಯದಿಂದಾದ ಅವ್ಯವಸ್ಥೆಯ ಬಗ್ಗೆ ಆಕ್ರೋಶಗೊಂಡಿದ್ದಾರೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಸಚಿವ ತನ್ವೀರ್ ಸೇಠ್ ಪ್ರಕರಣದ ಬಗ್ಗೆ ಪಕ್ಷದ ಕಾರ್ಯಕರ್ತರು ಪ್ರಶ್ನೆ ಕೇಳಿದಾಗ ಡಾ.ಪರಮೇಶ್ವರ್ ಅವರನ್ನು(ಮಂಜುಳಾ) ಬಾಯಿ ಮುಚ್ಚಿಸಿರುವುದು ಸರಿಯಲ್ಲ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ,ಕಳ್ಳಿಗೆ ತಾರಾನಾಥ ಶೆಟ್ಟಿ, ಅರುಣ್ ಕುವೆಲ್ಲೊ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News