ಉಳ್ಳಾಲ: ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ಶಾಂತಿ ಸಭೆ

Update: 2016-11-15 11:44 GMT

ಉಳ್ಳಾಲ, ನ.15: ಡಿಸಿಪಿ ಶಾಂತರಾಜು ಅವರ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಉಭಯ ಕೋಮುಗಳ ನಾಯಕರ ಉಪಸ್ಥಿತಿಯಲ್ಲಿ ಶಾಂತಿಸಭೆ ನಡೆಯಿತು.

ಡಿಸಿಪಿ ಶಾಂತರಾಜು ಮಾತನಾಡಿ ಮಸೀದಿಗೆ ಕಲ್ಲು ತೂರಿರುವಂತಹ ಅಹಿತಕರ ಘಟನೆ ನಡೆದರೂ ಸಹ ವಿಷಯ ತಿಳಿದಾಕ್ಷಣವೇ ಎರಡೂ ಸಮುದಾಯದ ಮುಖಂಡರು ಸೇರಿ ಆಗಿರುವ ದುಷ್ಕೃತ್ಯವನ್ನು ಖಂಡಿಸಿರುವುದು ಉಳ್ಳಾಲದಲ್ಲಿ ಕೋಮುಸಾಮರಸ್ಯವು ಸಧೃಢಗೊಂಡದ್ದಕ್ಕೆ ಸಾಕ್ಷಿಯಾಗಿದೆ. ಲಕ್ಷದಲ್ಲಿ ಹತ್ತು ಜನರು ಇಂತಹ ದುಷ್ಕೃತ್ಯ ನಡೆಸಲು ಹವಣಿಸುತ್ತಿರುತ್ತಾರೆ. ಅಂತವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ತಯಾರಿದೆ. ಶಂಕಿತರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ನೈಜ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ. ಅದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಉಳ್ಳಾಲ ದರ್ಗಾದ ಅಧ್ಯಕ್ಷ ರಶೀದ್ ಹಾಜಿ, ಪದಾಧಿಕಾರಿಗಳಾದ ಯು.ಟಿ.ಇಲ್ಯಾಸ್, ಮೊಗವೀರ ಸಮುದಾಯದ ಮುಖಂಡರಾದ ಭರತ್ ಕುಮಾರ್, ಸದಾನಂದ ಬಂಗೇರ, ಶಂಕರ್, ರಾಜೇಶ್, ನಗರ ಸಭಾ ಅಧ್ಯಕ್ಷ ಹುಸೇನ್ ಕುಂಞಿಮೋನು, ಸದಸ್ಯರಾದ ಇಸ್ಮಾಯೀಲ್ ಪೊಡಿಮೋನು, ಮುಹಮ್ಮದ್ ಮುಕ್ಕಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News