ಜಲ್ಲಿಗುಡ್ಡೆ: ಕಾರ್ಮಿಕರ ಸಭೆ
Update: 2016-11-15 17:41 IST
ಮಂಗಳೂರು, ನ.15: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಜಲ್ಲಿಗುಡ್ಡೆ ಘಟಕದ ಸಭೆಯು ಜಲ್ಲಿಗುಡ್ಡೆ ಸಿಐಟಿಯು ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಸಿದ್ಧಿಕ್ ಅಬೂಬಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ನಗರ ಅಧ್ಯಕ್ಷೆ ಜಯಂತಿ ಬಿ. ಶೆಟ್ಟಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಮಂಗಳೂರು ನಗರ ಅಧ್ಯಕ್ಷ ಸಂತೋಷ್ ಶಕ್ತಿನಗರ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಸಿಐಟಿಯು ಮುಖಂಡ ಸುರೇಶ್ ಬಜಾಲ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘಟನೆಯ ಹಿರಿಯ ಸಂಗಾತಿಗಳಾದ ವಾಸು ನಾಯ್ಕ, ಮೋನಪ್ಪಬಂಗೇರ, ಲಿಂಗಪ್ಪಚೌಟ, ಕೆ.ಎನ್.ವಿಠಲ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ 19 ಮಂದಿಯ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶಂಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮೋಹನ್ ಎಂ.ಆರ್.ಎಸ್. ಆಯ್ಕೆಯಾದರು.