×
Ad

ಕರಾವಳಿಯಲ್ಲಿ ಹಿಂಗಾರು ಮಳೆ

Update: 2016-11-15 18:12 IST

ಮಂಗಳೂರು, ನ.15: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮಂಗಳಾರ ಸಂಜೆ 5 ಗಂಟೆಗೆ ಹಿಂಗಾರು ಮಳೆಯಾಗಿದೆ. ಸುಮಾರು 15 ನಿಮಿಷಗಳ ಕಾಲ ಗುಡುಗು ಸಹಿತ ಮಳೆ ಸುರಿದಿದೆ. ಮಂಗಳೂರು ಮತ್ತು ಆಸುಪಾಸಿನ ಪ್ರದೇಶದಲ್ಲಿ ಮಳೆಯಾಗಿದೆ. ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ಜನಸಾಮಾನ್ಯರು ತೊಂದರೆಗೊಳಗಾದರು.

ರವಿವಾರದಿಂದಲೇ ಹಿಂಗಾರು ಮಳೆಯ ಅಲ್ಲಲ್ಲಿ ಸುರಿದಿದೆ. ಮಂಗಳವಾರ ಮೋಡ ಕವಿದ ವಾತಾವರಣದೊಂದಿಗೆ ಮಂಗಳೂರಿನಲ್ಲಿ ಮಳೆ ಬಿರುಸು ತೋರಿಸಿತು.

‘ಕರಾವಳಿ ಮತ್ತು ಒಳನಾಡು ಪ್ರದೇಶದಲ್ಲಿ ಇಂದು ಹಿಂಗಾರು ಮಳೆ ಸುರಿದಿದೆ. ಇದು ವಾಯುಭಾರ ಕುಸಿತದಿಂದ ಸುರಿದ ಮಳೆಯಲ್ಲ. ಇನ್ನೂ ಎರಡು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು’ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ‘ವಾರ್ತಾಭಾರತಿ’ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News