×
Ad

ಅಂಗಡಿಯಿಂದ ಕಳವು ಪ್ರಕರಣ: ಓರ್ವನ ಬಂಧನ

Update: 2016-11-15 20:25 IST

ಕಾಸರಗೋಡು, ನ.15: ಬದಿಯಡ್ಕ ಠಾಣಾ ವ್ಯಾಪ್ತಿಯ ನೆಲ್ಲಿಕಟ್ಟೆಯಲ್ಲಿ ಅಂಗಡಿಗೆ ನುಗ್ಗಿ ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪೈಕಿ ಬೀಟಿಯಡ್ಕದ ಮುಹಮ್ಮದ್ ಶಿಹಾಬ್ (24) ಎಂದು ಗುರುತಿಸಲಾಗಿದೆ.

ಆರೋಪಿ ರವಿವಾರ ರಾತ್ರಿ ಅಂಗಡಿಗೆ ನುಗ್ಗಿ ಐದು ಸಾವಿರ ರೂ. ನಗದು, ಎರಡು ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದ. ಶಿಹಾಬ್ ವಿರುದ್ಧ ಪಾಂಡೇಶ್ವರ ಮತ್ತು ತ್ರಿಶೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News