ಕಲ್ಲೇಗ ಜುಮಾ ಮಸೀದಿ ಅಧ್ಯಕ್ಷರಾಗಿ ಬಿ.ಎ.ಶಕೂರ್ ಹಾಜಿ
ಪುತ್ತೂರು, ನ.16: ಪುತ್ತೂರಿನ ಕಲ್ಲೇಗ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಬಿ.ಎ. ಶಕೂರ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರೆಹಮಾನ್ ಮುರ ಆಯ್ಕೆಯಾಗಿದ್ದಾರೆ.
ಶುಕ್ರವಾರ ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸೈಯದ್ ಅಹ್ಮದ್ ಪೂಕೋಯ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಸೀದಿ ಆಡಳಿತ ಮಂಡಳಿಯ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಕೆ.ಪಿ. ಮಹಮ್ಮದ್ ಹಾಜಿ ಕಲ್ಲೇಗ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಕಲ್ಲೇಗ, ಅಬೂಬಕ್ಕರ್ ಬೊಳುವಾರು, ಕಾರ್ಯದರ್ಶಿಗಳಾಗಿ ಅಬ್ದುಲ್ ರಹಿಮಾನ್ ಮುರ, ಹಾಜಿ ಅಶ್ರಫ್ ಕಲ್ಲೇಗ, ಕೋಶಾಧಿಕಾರಿಯಾಗಿ ವಕೀಲ ಕೆ.ಎಂ.ಸಿದ್ದೀಕ್ ಹಾಜಿ, ಲೆಕ್ಕ ಪರಿಶೋಧಕರಾಗಿ ಬಿ.ಎಂ.ಇಸ್ಮಾಯಿಲ್ ಮುರ ಆಯ್ಕೆಯಾದರು.
23 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಯಿತು. ಮಸೀದಿಯ ಮುದರ್ರಿಸ್ ಮೊಯ್ದು ಫೈಝಿ ಕಲ್ಲೇಗ ಉಪಸ್ಥಿತರಿದ್ದರು.
ಖಜಾಂಜಿ ಕೆ.ಎಂ.ಸಿದ್ದೀಕ್ ಹಾಜಿ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಂದಿಸಿದರು.