ಭಟ್ಕಳ: ಅಕ್ರಮ ಗೋವಾ ಮದ್ಯ ವಶ
Update: 2016-11-16 13:13 IST
ಭಟ್ಕಳ, ನ.16: ರೈಲು ಬೋಗಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 10 ಸಾವಿರ ರೂಪಾಯಿ ಮೌಲ್ಯದ ಗೋವಾ ರಾಜ್ಯದ ಮದ್ಯವನ್ನು ಅಬಕಾರಿ ಇಲಾಖೆ ಹಾಗೂ ರೈಲ್ವೆ ಪೊಲೀಸರು ಪೊಲಿಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಮುರುಡೇಶ್ವರ ರೈಲು ನಿಲ್ದಾಣದಲ್ಲಿ
ನಡೆದಿದೆ.
ಮುಂಬೈನಿಂದ ಮಂಗಳೂರಿಗೆ ಹೊರಟ್ಟಿದ್ದ ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನ ಸಾಮಾನ್ಯ ದರ್ಜೆಯ ಬೋಗಿಯ ಸೀಟಿನ ಅಡಿಯಲ್ಲಿ 4 ಮೂಟೆಗಳಲ್ಲಿ ಮದ್ಯವನ್ನು ಬಚ್ಚಿಡಲಾಗಿತ್ತು. ಸುಮಾರು 180 ಎಂಎಲ್ ನ 192 ಹನಿಗೈಡ್ ಬ್ರಾಂಡ್ ನ ಗೋವಾ ಮದ್ಯದ ಬಾಟಲಿಗಳು ಇದರಲ್ಲಿ ಇದ್ದವು.ರೈಲ್ವೆ ಇನ್ ಸ್ಪೆಕ್ಟರ್ ಸಂತೋಷ ಗಾಂವಕರ್,ಅಬಕಾರಿ ಇಲಾಖೆಯ ಇನ್ ಸ್ಪೆಕ್ಟರ್ ಕೆ.ಮನೋಹರ, ಸಬ್ ಇನ್ ಸ್ಪೆಕ್ಟರ್ ವಿಶ್ವನಾಥ ಭಟ್, ಸಿಬ್ಬಂದಿ ಪ್ರವೀಣ, ಕಲ್ಲಪ್ಪ, ಮಾದೇವ ನಾಯ್ಕ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.