ಯೆನೆಪೊಯದಲ್ಲಿ ಐಐಎಂಯುನ್ ಕಾರ್ಯಕ್ರಮ
ಮಂಗಳೂರು, ನ.16: ಯೆನೆಪೊಯ ವಿವಿ ಸಂಕೀರ್ಣದ ಎಂಡೋರೆನ್ಸ್‌ನಲ್ಲಿ ಇಂಡಿಯನ್ ಇಂಟರ್ ನ್ಯಾಶನಲ್ ಮಾಡೆಲ್ ಯುನೈಟೆಡ್ ನೇಶನ್ಸ್ (ಐಐಎಂಯುನ್) ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂತಹ ಕಾರ್ಯಕ್ರಮವು ದೇಶದ ಬೆಳವಣಿಗೆ ಮತ್ತು ಪ್ರಗತಿಯ ಬಗ್ಗೆ ಯುವ ವಿದ್ಯಾರ್ಥಿಗಳಿಗೆ ನಾಯಕತ್ವದ ಕೌಶಲ್ಯಗಳನ್ನು ಹಾಗೂ ಜಾಗತಿಕ ಚಿಂತನೆಗಳನ್ನು ಮಂಡಿಸಲು ಅವಕಾಶಗಳನ್ನು ನೀಡುತ್ತದೆ ಎಂದರು.
ಕಾರ್ಯಕ್ರಮದ ನಿರ್ದೇಶಕ ಅಭಿಷೇಕ್ ಧವನ್ ಮಾತನಾಡಿದರು. ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಐಐಎಂಯುಎನ್ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು. ಯೆನೆಪೊಯ ಶಾಲಾ ವಿದ್ಯಾರ್ಥಿಗಳು ‘ತುಳುನಾಡ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಯೆನೆಪೊಯ ಶಾಲಾ ವಿದ್ಯಾರ್ಥಿಗಳಾದ ಸ್ಮತಿ ಹಾಗೂ ರಾಹುಲ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು, ಶಾಂತಿನಿಕೇತನ ಕೋಲ್ಹಾಪುರ್, ಮಹೇಶ್ ಪದವಿ ಪೂರ್ವ ಕಾಲೇಜು, ಶಾರದಾ ವಿದ್ಯಾನಿಕೇತನ, ಭುವನಜ್ಯೋತಿ, ಪ್ರೆಸ್ಟೀಜ್ ಇಂಟರ್ ನ್ಯಾಶನಲ್, ಬೊಸ್ಕೊ ಶಾಲೆ, ಕೆನರಾ ಸಿಬಿಎಸ್‌ಇ ಮುಂತಾದ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಐಐಎಂಯುಎನ್ ಮಂಗಳೂರು ಚಾಪ್ಟರ್‌ನಲ್ಲಿ ದಿ ಯೆನೆಪೊಯ ಶಾಲೆಯು ಅತ್ಯುತ್ತಮ ನಿಯೋಗ ಪ್ರಶಸ್ತಿಯನ್ನು ಪಾರಿತೋಷಕದೊಂದಿಗೆ ತಮ್ಮದಾಗಿಸಿಕೊಂಡರೆ, ಸೈಂಟ್ ಎಲೋಯಸ್ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.