ನೋಡಿದ್ದೀರಾ ಇಂತಹ ಒಂದು ಮದುವೆ ಆಮಂತ್ರಣ ಪತ್ರಿಕೆ?

Update: 2016-11-16 13:01 GMT

ಬಂಟ್ವಾಳ, ನ.16: ಪತ್ರಕರ್ತನಿಗೆ ಲೇಖನಿಯೇ ಆಸ್ತಿ. ಲೇಖನಿ ಖಡ್ಗಕ್ಕಿಂತ ಹರಿತ. ಈ ಎಲ್ಲದರ ನಡುವೆ ಬಂಟ್ವಾಳದ ಪತ್ರಕರ್ತನೊಬ್ಬರು ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಲೇಖನಿ ಮಾದರಿಯಲ್ಲಿ ಮುದ್ರಿಸಿ ಗಮನ ಸೆಳೆದಿದ್ದಾರೆ.ಬಿ.ಸಿ.ರೋಡಿನ ಯುವ ಛಾಯಾಗ್ರಾಹಕ, ಪತ್ರಕರ್ತ ಕಿಶೋರ್ ಪೆರಾಜೆಯವರ ಲೇಖನಿ ಮಾದರಿಯ ವಿವಾಹ ಆಮಂತ್ರಣ ಅತ್ಯಾಕರ್ಷವಾಗಿ ಮೂಡಿ ಬಂದಿದೆ.

ಕಂಪ್ಯೂಟರ್ ಯುಗದ ಪ್ರಸಕ್ತ ಕಾಲಘಟ್ಟದಲ್ಲಿ ಲೇಖನಿ ಮತ್ತು ಪತ್ರಕರ್ತರ ನಡುವಿನ ಅಂತರ ಹೆಚ್ಚುತಿದೆಯಾದರೂ ಇದು ಬಿಡಲಾಗದ ನಂಟು ಎಂಬುದನ್ನು ಈ ಆಮಂತ್ರಣ ಪತ್ರಿಕೆ ಸಾರಿ ಹೇಳುತ್ತಿದೆ. ಛಾಯಾಗ್ರಾಹಕರಾಗಿ ವೃತ್ತಿ ಆರಂಭಿಸಿದ ಕಿಶೋರ್ ಪೆರಾಜೆ ಬಳಿಕ ಮಾಧ್ಯಮದ ಜೊತೆ ಬೆರೆತು ಮಾಧ್ಯಮ ಛಾಯಾಗ್ರಾಹಕರಾಗಿಯೂ ಗುರುತಿಸಿಕೊಂಡವರು. ತನ್ನ ವಿಹಾಹದ ಆಮಂತ್ರಣ ಪತ್ರಿಕೆಯಲ್ಲೂ ಇದನ್ನು ಸೊಗಸಾಗಿ ಉಲ್ಲೇಖಿಸಿದ್ದು ಕ್ಯಾಮರಾ ನನಗೆ ಬದುಕು ಕೊಟ್ಟಿದೆ... ಲೇಖನಿ ಆ ಬದುಕಲಿ ಗೌರವ ತಂದಿದೆ ಎಂಬ ಪದಗುಚ್ಚಗಳು ಆಹ್ವಾನಿತನನ್ನು ಆಕರ್ಷಿಸುತ್ತದೆ.

ದಿನಂಪ್ರತಿ ಅದೆಷ್ಟೋ ಆಮಂತ್ರಣಗಳು ನಮ್ಮ ನಿಮ್ಮ ಕೈ ಸೇರುತ್ತದೆ. ಕಾರ್ಯಕ್ರಮ ಮುಗಿದ ಬಳಿಕ ಅವು ಕಸವಾಗಿ ಬಿಡುತ್ತದೆ. ಆದರೆ ಕಿಶೋರ್ ಪೆರಾಜೆ ಅವರ ಮದುವೆಯ ವಿಶಿಷ್ಟ ಆಮಂತ್ರಣ ನೋಡಿದವರೆಲ್ಲ ಹೇಳುವ ಒಂದೇ ಮಾತು ಸಂಗ್ರಹ ಯೋಗ್ಯ ಆಮಂತ್ರಣವಾಗಿದೆ ಎಂಬುದು. ಆಮಂತ್ರಣ ಪಡೆದವರೆಲ್ಲ ಒಂದಾಷ್ಟು ಸಮಯ ಪತ್ರಿಕೆಯನ್ನು ತಿರುಗಿಸಿ ತಿರುಗಿಸಿ ನೋಡುವುದಿದೆ. ಬಳಿಕ ಸೂಪರ್ ಆಮಂತ್ರಣ, ಚೆನ್ನಾಗಿದೆ, ಪತ್ರಕರ್ತನಿಗೆ ಹೇಳಿದ ಆಮಂತ್ರಣ ಎಂದು ಹೇಳಿದ್ದೂ ಇದೆ. ಈ ತಿಂಗಳಲ್ಲಿ ಈ ವಿವಾಹ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News