‘ಜನಾರೋಗ್ಯವೇ ರಾಷ್ಟ್ರ ಶಕ್ತಿ’ ಮ್ಯಾರಥಾನ್ ಓಟ

Update: 2016-11-16 13:15 GMT

ಉಡುಪಿ, ನ.16: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜನಾ ರೋಗ್ಯವೇ ರಾಷ್ಟ್ರ ಶಕ್ತಿ ಅಭಿಯಾನದ ಪ್ರಯುಕ್ತ ಜಿಲ್ಲಾ ಸಮಿತಿಯ ವತಿ ಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಅಜ್ಜರಕಾಡಿನವರೆಗೆ ನ.15ರಂದು ಹಮ್ಮಿಕೊಳ್ಳಲಾದ ಮ್ಯಾರಥಾನ್ ಓಟಕ್ಕೆ ಪಿಎಫ್‌ಐ ರಾಜ್ಯ ಕೋಶಾಧಿಕಾರಿ ಮೊಹ್ಸಿನ್ ಗುಲ್ಬರ್ಗ ಚಾಲನೆ ನೀಡಿದರು.

ಅಜ್ಜರಕಾಡಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಮಾತ ನಾಡಿ, ದೇಶ ಪ್ರಗತಿ ಸಾಧಿಸಬೇಕಾದರೆ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಅಗತ್ಯ. ಇಂದು ದೇಶದಲ್ಲಿ ಶೇ.30ರಷ್ಟು ಮಂದಿ ಬೊಜ್ಜುತನ, ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಈಗಾಗಲೇ ದೇಶದ 7ಕೋಟಿ ಜನರಿಗೆ ಡಯಾಬಿಟಿಸ್ ಕಾಯಿಲೆ ಇದ್ದು, ಮುಂದಿನ ದಿನಗಳಲ್ಲಿ ಇವರ ಸಂಖ್ಯೆ ದುಪ್ಪಟ್ಟು ಆಗಲಿದೆ ಎಂದು ತಿಳಿಸಿದರು.

ಕೋಟೇಶ್ವರದ ಮೆರಿಡಿಯನ್ ಹೆಲ್ತ್ ರೆಸಾರ್ಟ್‌ನ ಆರೋಗಯ ನಿರ್ದೇಶಕ ಡಾ.ರಫೀಕ್, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಮುಫ್ತಿ ಮುಅಝ್ಝಮ್ ವೌಲಾನ, ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಲ್ಪೆ, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ನಿಸಾರ್ ಬ್ರಹ್ಮಾವರ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಪಿಎಫ್‌ಐ ಜಿಲ್ಲಾಧ್ಯಕ್ಷ ಫಝಿಲ್ ಆದಿಉಡುಪಿ ಉಪಸ್ಥಿತರಿದ್ದರು.

ಆಲಂ ಬ್ರಹ್ಮಾವರ ಸ್ವಾಗತಿಸಿದರು. ಸಾಧಿಕ್ ಉಡುಪಿ ವಂದಿಸಿದರು. ಹನೀಫ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯ ಕ್ರಮಕ್ಕೆ ಮುನ್ನ ಯೋಗ ಹಾಗೂ ವ್ಯಾಯಾಮ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News