ಎನ್‌ಎಂಸಿ ತಡೆಗೆ ಆಗ್ರಹಿಸಿ ವೈದ್ಯರಿಂದ ಧರಣಿ

Update: 2016-11-16 13:20 GMT

ಉಡುಪಿ, ನ.16: ಕೇಂದ್ರ ಸರಕಾರವು ನೂತನವಾಗಿ ರಚಿಸಲು ಉದ್ದೇಶಿಸಿ ರುವ ರಾಷ್ಟ್ರೀಯ ಮೆಡಿಕಲ್ ಕಮಿಷನ್(ಎನ್‌ಎಂಸಿ)ನ್ನು ತಡೆಹಿಡಿಯು ವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಶಾಖೆಯು ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.

ಈ ರಾಷ್ಟ್ರೀಯ ಮೆಡಿಕಲ್ ಕಮಿಷನ್ ಮಸೂದೆಯು ದೇಶದ ವೈದ್ಯ ಕೀಯ ವ್ಯವಸ್ಥೆಗೆ ಮಾರಕವಾಗಲಿದ್ದು, ಯಾವುದೇ ಕಾರಣಕ್ಕೂ ಈ ಅವೈಜ್ಞಾನಿಕ ಕಾನೂನನ್ನು ಜಾರಿಗೆ ತರಬಾರದು. ಕೇಂದ್ರ ಸರಕಾರ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು. ಬಳಿಕ ಈ ಕುರಿತ ಮನವಿಯನ್ನು ಅಪರ ಜಿಲ್ಲಾಧಿಕಾರಿ ಅನುರಾಧ ಅವರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಾಯಿತು.

ಧರಣಿಯಲ್ಲಿ ಐಎಂಎ ಅಧ್ಯಕ್ಷ ಡಾ.ಮಧುಸೂದನ ನಾಯಕ್, ಕಾರ್ಯ ದರ್ಶಿ ಡಾ.ಮುರಲೀಧರ್ ಪಾಟೀಲ್, ಕೋಶಾಧಿಕಾರಿ ಡಾ.ವೆಂಕಟೇಶ್ ಶ್ಯಾನುಭಾಗ್, ಉಪಾಧ್ಯಕ್ಷ ಡಾ.ವೈ.ಎಸ್.ರಾವ್, ಡಾ.ಹರೀಶ್ ನಾಯಕ್, ಡಾ.ಕಿರಣ್ ಕುಮಾರ್, ಡಾ.ಉಮೇಶ್ ನಾಯಕ್, ಡಾ.ಸತೀಶ್ ಕಾಮತ್, ಡಾ.ಅಶೋಕ್ ಕುಮಾರ್, ಡಾ.ಆರ್.ಎನ್.ಭಟ್, ಡಾ.ಗೀತಾ ಪುತ್ರನ್, ಡಾ.ವಾಸುದೇವ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News