ವೈದ್ಯಕೀಯ ಆಯೋಗ ರಚನೆಗೆ ಆಕ್ಷೇಪ: ವೈದ್ಯರ ಸಂಘದಿಂದ ಮನವಿ ಸಲ್ಲಿಕೆ

Update: 2016-11-16 15:04 GMT

ಪುತ್ತೂರು, ನ.16: ಕೇಂದ್ರ ಸರಕಾರ ವೈದ್ಯಕೀಯ ಮಂಡಳಿಯನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ವೈದ್ಯಕೀಯ ಸಂಘದ ವತಿಯಿಂದ ಸಾಂಕೇತಿಕ ಧರಣಿ ನಡೆಯಿತು.

ಕೇಂದ್ರ ಸರಕಾರ ವೈದ್ಯಕೀಯ ಕ್ಷೇತ್ರದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ಬದಲು ಭಾರತೀಯ ವೈದ್ಯಕೀಯ ಮಂಡಳಿಯನ್ನು ರದ್ದುಗೊಳಿಸಿ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡ ವೈದ್ಯಕೀಯ ಆಯೋಗ ರಚನೆಗೆ ಮುಂದಾಗಿರುವುದನ್ನು ವಿರೋಧಿಸಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ 2 ಗಂಟೆಗಳ ಸತ್ಯಾಗ್ರಹ ನಡೆಸಲಾಯಿತು.

ಉದ್ದೇಶಿತ ಎನ್‌ಎಂಸಿ ಮಸೂದೆಯನ್ನು ನಿಲ್ಲಿಸಬೇಕು. ಚಾಲ್ತಿಯಲ್ಲಿರುವ ಸಾಂವಿಧಾನಿಕ ಸಂಸ್ಥೆ ಐಎಂಸಿಗೆ ಆವಶ್ಯವಿರುವ ತಿದ್ದುಪಡಿಗಳನ್ನು ತಂದು ಅದನ್ನು ಉಳಿಸಿಕೊಳ್ಳಬೇಕು. ಗ್ರಾಹಕ ರಕ್ಷಣಾ ಕಾನೂನಿನ ಅಡಿಯಲ್ಲಿ ವೈದ್ಯರು ನೀಡಬೇಕಾದ ಪರಿಹಾರ ಧನಕ್ಕೆ ಮಿತಿ ಹೇರಬೇಕು. ಏಕವೈದ್ಯ ಆಸ್ಪತ್ರೆಗಳನ್ನು ಕ್ಲಿನಿಕಲ್ ಎಸ್ಟಾಲಿಬಸಿಮೆಂಟ್ ಆಕ್ಟ್‌ನಿಂದ ಹೊರಗಿಡಬೇಕು. ಈ ಕಾನೂನು ಅಡಿಯಲ್ಲಿ ನಡೆಯುವ ಲೈಸನ್ಸ್‌ರಾಜ್ ಪದ್ದತಿಯನ್ನು ತೊಡೆದು ಹಾಕಬೇಕು. ಮಾನವ ಸಹಜವಾಗಿ ನಡೆಯುವ ಸಣ್ಣ ಪುಟ್ಟ ತಪ್ಪುಗಳಿಗೆ ಪಿಸಿ-ಪಿಎನ್‌ಡಿಟಿ ಆಕ್ಟ್‌ನಲ್ಲಿ ವೈದ್ಯರಿಗೆ ಗಂಭೀರ ಶಿಕ್ಷೆ ನೀಡುವುದನ್ನು ರದ್ದುಗೊಳಿಸಬೇಕು. ಹಾಗೂ ಲಿಂಗಪತ್ತೆ ಮತ್ತು ್ರೂಣ ಹತ್ಯೆ ಪ್ರಕರಣಗಳಲ್ಲಿ ಮಾತ್ರ ವೈದ್ಯರನ್ನು ದಂಡಿಸುವುದು, ವೈದ್ಯರು, ಆಸ್ಪತ್ರೆ ಮತ್ತು ಸಿಬ್ಬಂದಿಯ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಹಾಗೂ ಅವರನ್ನು ರಕ್ಷಿಸುವ ಸೂಕ್ತ ಕಾನೂನು ಜಾರಿಗೊಳಿಸಬೇಕು. ಆಧುನಿಕ ವೈದ್ಯ ಪದ್ದತಿಯ ಹೊತೆ ಇನ್ನಿತರ ವೈದ್ಯ ಪದ್ದತಿಯನ್ನು ಸೇರಿಸುವ ಅವೈಜ್ಞಾನಿಕ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನು ಈ ಸಂದರ್ದಲ್ಲಿ ಮಂಡಿಸಲಾಯಿತು.

ಬೇಡಿಕೆ ಮನವಿಯನ್ನು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಐಎಂಸಿ ಪುತ್ತೂರು ಅಧ್ಯಕ್ಷ ಡಾ. ವಿಶ್ವನಾಥ ಭಟ್, ಕಾರ್ಯದರ್ಶಿ ಡಾ. ನರಸಿಂಹ ಶರ್ಮಾ, ಡಾ. ಪ್ರಸಾದ್ ಂಡಾರಿ, ಡಾ. ಜೆ.ಸಿ ಅಡಿಗ, ಡಾ. ಶ್ರೀಕಾಂತ್ ರಾವ್, ಡಾ. ಸುಬ್ರಾಯ ಟ್, ಡಾ. ರವೀಂದ್ರ, ಡಾ. ಸುಲೇಖಾ, ಡಾ.ಎಸ್.ಎಸ್. ಜೋಶಿ, ಡಾ ಸುರೇಶ್ ಪುತ್ತೂರಾಯ, ಡಾ ಬಾಸ್ಕರ, ಡಾ. ಶ್ರೀಪತಿ ರಾವ್. ಡಾ ಬದ್ರೀನಾಥ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News