ಪೊಲೀಸ್ ಠಾಣೆಯ ಕಂಪೌಂಡ್ ಕುಸಿತ: ಹಲವು ಬೈಕ್‌ಗಳಿಗೆ ಹಾನಿ

Update: 2016-11-16 15:25 GMT

ಪುತ್ತೂರು, ನ.16: ನಗರದ ಟ್ರಾಫಿಕ್ ಪೊಲೀಸ್ ಠಾಣೆ ಬಳಿಯ ಕಂಪೌಂಡ್ ಕುಸಿದು ಹಲವು ಬೈಕ್‌ಗಳಿಗೆ ಹಾನಿಯಾದ ಘಟನೆ ಬುಧವಾರ ಸಂಜೆ ನಡೆದಿದೆ.

ಕಳೆದ ಕೆಲವು ದಿನಗಳಿಂದ ಇಲ್ಲಿನ ಪೈಪ್ ಹಾನಿಯಾದ ಕಾರಣದಿಂದ ನೀರು ಸೋರಿಕೆಯಾಗುತ್ತಿತ್ತು.ಇದರಿಂದ ಕಂಪೌಡ್ ತಳಬಾಗ ಸಡಿಲವಾಗಿ ಗೋಡೆ ಕುಸಿದಿದೆ.  ಬುಧವಾರ ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಕಂಪೌಡ್ ಕುಸಿತವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಂಪೌಡ್ ಕುಸಿತದಿಂದಾಗಿ ಇಲ್ಲಿ ಪಾರ್ಕ್ ಮಾಡಿದ್ದ ಹಲವು ಬೈಕ್‌ಗಳು ಹಾಗೂ ಇತರ ವಾಹನಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯರಾದ ಮುಹಮ್ಮದ್ ಅಲಿ, ರಾಜೇಶ್ ಬನ್ನೂರು, ವಿಶ್ವನಾಥ ಗೌಡ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News