×
Ad

ಮಕ್ಕಳ ಮಾನಸಿಕ ತೊಂದರೆ ಕುರಿತು ಉಪನ್ಯಾಸ

Update: 2016-11-16 21:14 IST

ಉಡುಪಿ, ನ.16: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಆಸ್ಪತ್ರೆಯ ಬಾಲರೋಗ ವಿಭಾಗ ಮತ್ತು ಬೆಂಗಳೂರು ಹಿಮಾಲಯ ಡ್ರಗ್ ಕಂಪೆನಿ ಜಂಟಿ ಆಶ್ರಯದಲ್ಲಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಕಂಡುಬರುವ ಮಾನಸಿಕ ತೊಂದರೆಗಳು ಮತ್ತು ಪರಿಹಾರ, ಆರೋಗ್ಯವಂತ ಶಿಶು ಮತ್ತು ಛದ್ಮವೇಷ ಸ್ಪರ್ಧೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಮನೋ ತಜ್ಞ ಡಾ.ಪಿ.ವಿ.ಭಂಡಾರಿ ಮಕ್ಕಳಲ್ಲಿ ಕಂಡುಬರುವ ಮಾನಸಿಕ ತೊಂದರೆಗಳು ಮತ್ತು ಪರಿಹಾರ ಎಂಬ ವಿಷಯದ ಕುರಿತು ವಿಶೇಷ ಉಪ ನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮುರಳೀಧರ ಶರ್ಮ ವಹಿಸಿದ್ದರು.

ಬಾಲರೋಗ ವಿಭಾಗದ ಮುಖ್ಯಸ್ಥ ಡಾ.ಪ್ರಥ್ವಿರಾಜ್ ಪುರಾಣಿಕ್ ಸ್ವಾಗತಿಸಿದರು. ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಆರ್.ರಾಮಚಂದ್ರ, ಹಿಮಾಲಯ ಡ್ರಗ್ ಕಂಪೆನಿಯ ರೀಜನಲ್ ಮ್ಯಾನೇಜರ್ ಮಂಜುನಾಥ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯವಂತ ಶಿಶು ಸ್ಪರ್ಧೆ ಮತ್ತು ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು

 ಬಾಲರೋಗ ವಿಭಾಗದ ಸಹಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ಹಾಗೂ ಉಪನ್ಯಾಸಕ ಡಾ.ಶರಶ್ಚಂದ್ರ ಆರ್. ಕಾರ್ಯಕ್ರಮದ ಸಂಯೋಜಿಸಿ ದರು. ಸ್ನಾತಕ್ಕೋತ್ತರ ವಿಭಾಗದ ವಿದ್ಯಾರ್ಥಿ ಡಾ.ಆಲ್ಮಸ್ ತರನ್ನಮ್ ಕಾರ್ಯಕ್ರಮ ನಿರೂಪಿಸಿದರು. ಡಾ.ನಾಗರತ್ನ ಎಸ್.ಜೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News