×
Ad

ಮಕ್ಕಳೊಂದಿಗೆ ಪೊಲೀಸ್ ಸಂವಾದ ಕಾರ್ಯಕ್ರಮ

Update: 2016-11-16 22:54 IST

ಮಂಗಳೂರು, ನ. 16: ಚೈಲ್ಡ್‌ಲೈನ್, ರೋಶನಿ ನಿಲಯ ಮಂಗಳೂರು ಹಾಗೂ ಪಡಿ ಸಂಸ್ಥೆ ಬೆಂದೂರುವೆಲ್ ಇವರ ಜಂಟಿ ಸಹಯೋಗದಲ್ಲಿ ಇಂದು ಮಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಂಡೇಶ್ವರ ಶಾಲೆಯ ಸುಮಾರು 40 ಮಕ್ಕಳು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದರು.

ಪೊಲೀಸ್ ಕಮಿಷನರ್ ಕಚೇರಿಯ ಕಾನ್ಫರೆನ್ಸ್ ಹಾಲ್ನಲ್ಲಿ ಹಮ್ಮಿಕೊಂಡಿರುವ ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಸುರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಎಂಬ ಪರಿಕಲ್ಪನೆಯಂತೆ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಮಕ್ಕಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಮಯ ಶಾಲಾ ಮಕ್ಕಳು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹದ ರಿಸ್ಟ್ ಬ್ಯಾಂಡ್ ಕಟ್ಟಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಕೆ. ಶಾಂತರಾಜು, ಡಾ.ಎಂ. ಸಂಜೀವ್ ಪಾಟೀಲ್ ಮತ್ತು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಉಪಸ್ಥಿತರಿದ್ದರು. ಮಕ್ಕಳ ವಿಶೇಷ ಪೊಲೀಸ್ ಘಟಕದ ಪಿಐ ರಫೀಕ್ ಹಾಗೂ ಸಿಬ್ಬಂದಿ ಕಾರ್ಯಕ್ರಮ ನಿರೂಪಿಸಿದರು.

ನಂತರ ಶಾಲಾ ಮಕ್ಕಳಿಗೆ ಪೊಲೀಸ್ ಕಂಟ್ರೋಲ್ ರೂಂ, ಸಿಟಿ ಸ್ಪಷಲ್ ಬ್ರಾಂಚ್ ಹಾಗೂ ಪೊಲೀಸ್ ಶ್ವಾನ ದಳದ ಕೆಲಸ ಕಾರ್ಯಗಳನ್ನು ಆಯಾಯ ಘಟಕದ ಪೊಲೀಸ್ ಸಿಬ್ಬಂದಿಗಳಿಂದ ಪರಿಚಯಿಸಲಾಯಿತು. ಲಘು ಉಪಹಾರದೊಂದಿಗೆ ಶಾಲಾ ಮಕ್ಕಳನ್ನು ಬೀಳ್ಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News