×
Ad

ಪಜೀರು: ಜೋಸೆಫ್‌ವಾಜ್ ಗ್ರೆಟ್ಟೋಗೆ ಹಾನಿ

Update: 2016-11-16 22:59 IST

ಮಂಗಳೂರು, ನ. 16: ಬಂಟ್ವಾಳ ತಾಲೂಕಿನ ಪಜೀರು ಚರ್ಚ್ ಬಳಿ ಮಣ್ಣು ತೆಗೆಯುವ ಸಂದರ್ಭ ಪಕ್ಕದ ಮನೆ ಆವರಣದಲ್ಲಿ ನಿರ್ಮಿಸಲಾಗಿದ್ದ ಜೋಸೆಫ್‌ವಾಜ್ ಗ್ರೆಟ್ಟೋ ಬುಡಸಮೇತ ಬಿದ್ದಿದ್ದು ಈ ಸಂಬಂಧ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಬಶೀರ್, ಹನೀಫ್, ಅಶ್ರಫ್, ಮಹಮ್ಮದ್ ಹಾಗೂ ಇತರರನ್ನು ಆರೋಪಿಗಳೆಂದು ಗುರುತಿಸಲಾಗಿದೆ.

ಪಜೀರ್ ಮರ್ಸಿಯಮ್ಮನವರ ಹಳೆ ಚರ್ಚ್ ಬಳಿ ಪ್ರಾರ್ಥನಾ ಮಂದಿರವೊಂದರ ನಿರ್ಮಾಣ ಕಾರ್ಯ ನಡೆಯುತಿದ್ದು, ಮಣ್ಣು ಸಮತಟ್ಟುಗೊಳಿಸುವ ಕಾರ್ಯ ಸೋಮವಾರ ನಡೆದಿದೆ. ಈ ಸಂದರ್ಭ ಜೆಸಿಬಿಯಲ್ಲಿ ಮಣ್ಣು ತೆಗೆಯುತ್ತಿದ್ದಾಗ ಪಕ್ಕದಲ್ಲಿದ್ದ ಮನೆಯ ಆವರಣದಲ್ಲಿದ್ದ ಗ್ರೆಟ್ಟೋ ಬುಡಸಹಿತ ನೆಲಕ್ಕೆ ಬಿದ್ದಿದೆ. ಹೊಸ  ಗ್ರೆಟ್ಟೋ ಕಟ್ಟಿಕೊಡುವಂತೆ ಮನೆ ಮಾಲಕ ಸಿಪ್ರಿಯನ್ ಫೆರಾವೋ ಮನವಿ ಮಾಡಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಕಾಲು ಮುರಿಯುವ ಬೆದರಿಕೆ ಹಾಕಿದ್ದಾರೆ ಎಂದು ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News