×
Ad

ಚೈನಾ ಓಪನ್: ಸೈನಾ ನೆಹ್ವಾಲ್‌ಗೆ ಸೋಲು;

Update: 2016-11-17 00:11 IST

ಬೀಜಿಂಗ್, ನ.16: ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಲ್ಲಿ ಆರಂಭಗೊಂಡ ಚೈನಾ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೋಲು ಅನುಭವಿಸಿ ಪ್ರಥಮ ಸುತ್ತಿನಲ್ಲೇ ಹೊರ ಬಿದ್ದರು.
ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ. ಸಿಂಧು ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.
ಕಳೆದ ಒಲಿಂಪಿಕ್ಸ್ ವೇಳೆ ಸೈನಾ ನೆಹ್ವಾಲ್ ಕಾಲು ನೋವಿನ ಸಮಸ್ಯೆ ಎದುರಿಸಿದ್ದರು. ಇದೀಗ ಬಳಿಕ ಭಾಗವಹಿಸಿರುವ ಮೊದಲ ಪಂದ್ಯದಲ್ಲಿ ಸೈನಾ ಥಾಯ್ಲೆಂಡ್‌ನ ಪೊರ್ನಿಟಿಪ್ ಬುರ್ನಾಪ್ರಸೆರ್ಟಸಕ್ ವಿರುದ್ಧ 16-21, 21-19, 14-21 ಅಂತರದಲ್ಲಿ ಸೋತು ನಿರ್ಗಮಿಸಿದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿದ್ದ ಸೈನಾ ಅವರು 2014ರಲ್ಲಿ ಚೈನಾ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಕಳೆದ ವರ್ಷ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದರು. ಸೈನಾ ಮುಂದಿನ ವಾರ ಆರಂಭವಾಗಲಿರುವ ಹಾಂಕಾಂಗ್ ಸೂಪರ್ ಸಿರೀಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಳನೆ ಶ್ರೇಯಾಂಕಿತೆ ಪಿ.ವಿ. ಸಿಂಧು ಅವರು ಚೈನಾ ತೈಪೆಯ ಚಿಯಾ ಹಸ್ನಿ ಲೀ ವಿರುದ್ಧ 21-12, 21-16 ಅಂತರದಲ್ಲಿ ಜಯ ಗಳಿಸಿದರು. ಕೇವಲ 34 ನಿಮಿಷದ ಆಟದಲ್ಲಿ ಸಿಂಧು ಅವರು ಲೀ ಅವರ ಸವಾಲನ್ನು ಕೊನೆಗೊಳಿಸಿದರು.
ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚು ಜಯಿಸಿರುವ ಸಿಂಧು ಅವರು ಮುಂದಿನ ಪಂದ್ಯದಲ್ಲಿ ಅಮೆರಿಕದ ಬಿವೆನ್ ಝಾಂಗ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಅಜಯ್ ಜಯರಾಮ್ ಮತ್ತು ಎಚ್.ಎಸ್.ಪ್ರಣಯ್ ಎರಡನೆ ಸುತ್ತು ತಲುಪಿದ್ದಾರೆ.
ವರ್ಲ್ಡ್ ನಂ. 23 ಜಯರಾಮ್ ಅವರು ಚೀನಾದ ಝು ಸಿಯೂಯನ್ ವಿರುದ್ಧ 21-19, 20-22, 21-17 ಅಂತರದಲ್ಲಿ ಮಣಿಸಿದರು. ಪ್ರಣಯ್ ಅವರು ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆ್ಯಂಗುಸ್ ವಿರುದ್ಧ 21-13, 21-13 ಅಂತರದಲ್ಲಿ ಗೆಲುವು ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News