ಬ್ರಹ್ಮಾವರ: ಬಾಲಕಿ ನಾಪತ್ತೆ

Update: 2016-11-16 18:46 GMT

ಉಡುಪಿ, ನ.16: ತಾಲೂಕಿನ ಬ್ರಹ್ಮಾವರದಲ್ಲಿ ವಾಸವಿದ್ದ ತಾರಾ ಎಂಬವರ ಪುತ್ರಿ ಅಂಜಲಿ (14) ಸಂಬಂಧಿಕರ ಮನೆಗೆಂದು ಹೋದವರು ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿ 5.3 ಅಡಿ ಉದ್ದವಿದ್ದು, ದಪ್ಪಶರೀರ, ಎಣ್ಣೆ ಕಪ್ಪು ಮೈಬಣ್ಣ, ಹಣೆಯ ಮಧ್ಯೆ ಹಚ್ಚೆಯ ಗುರುತಿದೆ. ಎಡಮೊಣಕೈ ಮೇಲೆ ಅನಿತಾ ಎಂಬ ಹೆಸರಿನ ಹಚ್ಚೆ ಇದ್ದು, ಪಕ್ಕದಲ್ಲಿ ಹೂವಿನ ಹಚ್ಚೆಯಿದೆ. ಕನ್ನಡ, ಹಿಂದಿ, ನೇಪಾಳಿ ಭಾಷೆ ಮಾತನಾಡುತ್ತಾಳೆ. ಈ ಬಾಲಕಿಯ ಕುರಿತು ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಉಡುಪಿ: 0820-2526444, ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ವೃತ್ತ: 0820-2520329, ಮೊಬೈಲ್: 9480805430 ಅಥವಾ ಪೊಲೀಸ್ ಉಪನಿರೀಕ್ಷಕರು ಮಹಿಳಾ ಪೊಲೀಸ್ ಠಾಣೆ ದೂರವಾಣಿ: 0820-25599, ಮೊ: 9480805458ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News