ಎರಡನೆ ಟೆಸ್ಟ್: ಖಾತೆ ತೆರೆಯದೆ ನಿರ್ಗಮಿಸಿದ ರಾಹುಲ್
Update: 2016-11-17 10:24 IST
ವಿಶಾಖಪಟ್ಟಣ,ನ.17: ಡಾ.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಆರಂಭಗೊಂಡ ಇಂಗ್ಲೆಂಡ್ ವಿರುದ್ಧ ಎರಡನೆ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ಆರಂಭಿಕ ದಾಂಡಿಗರಾದ ಕೆ.ಎಲ್.ರಾಹುಲ್ ಮತ್ತು ಮುರಳಿ ವಿಜಯ್ ಬೇಗನೆ ನಿರ್ಗಮಿಸಿದ್ದಾರೆ.
ಟಾಸ್ ಜಯಿಸಿದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತ್ತು. ಗೌತಮ್ ಗಂಭೀರ್ ಬದಲಿಗೆ ಸ್ಥಾನ ಪಡೆದಿದ್ದ ಲೋಕೇಶ್ ರಾಹುಲ್ (0) ಖಾತೆ ತೆರೆಯುವ ಮೊದಲೇ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಸ್ಟೋಕ್ಸ್‌ಗೆ ಕ್ಯಾಚ್ ನೀಡಿ ವಾಪಸಾದರು. ಆಗ ತಂಡದ ಸ್ಕೋರ್ 6 ಆಗಿತ್ತು. ತಂಡದ ಸ್ಕೋರ್ 20 ತಲುಪುವಾಗ ಮುರಳಿ ವಿಜಯ್(20) ಅವರು ಆಂಡರ್ಸನ್ ಎಸೆತದಲ್ಲಿ ಸ್ಟೋಕ್ಸ್‌ಗೆ ಕ್ಯಾಚ್ ನೀಡಿದರು. ಚೇತೇಶ್ವರ ಪೂಜಾರ್ (8) ಮತ್ತು ನಾಯಕ ವಿರಾಟ್ ಕೊಹ್ಲಿ (8)ತಂಡದ ಬ್ಯಾಟಿಂಗ್‌ನ್ನು ಮುಂದುವರಿಸಿದ್ದಾರೆ. ಭಾರತ 10 ಓವರ್ ಗಳ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದೆ.