×
Ad

ಡಿಸೆಂಬರ್ 24-25ರಂದು ‘ಜನನುಡಿ 2016’

Update: 2016-11-17 15:12 IST

ಮಂಗಳೂರು, ನ.17: ನಗರದ ಶಾಂತಿಕಿರಣ ಸಭಾಂಗಣದಲ್ಲಿ ಡಿಸೆಂಬರ್ 24 ಮತ್ತು 25ರಂದು 2 ದಿನಗಳ ಕಾಲ ಜನನುಡಿ ಗೋಷ್ಠಿ ನಡೆಯಲಿದೆ.

2013ರಲ್ಲಿ ಅಭಿಮತ ಮಂಗಳೂರು ಮೊದಲ ಬಾರಿಗೆ ಜನನುಡಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದೀಗ 4ನೇ ವರ್ಷಕ್ಕೆ ಕಾಲಿಟ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳ ಬರಹಗಾರರು, ಚಳವಳಿಗಾರರು ಮತ್ತು ಸಾಹಿತ್ಯಾಸಕ್ತರು ಜನನುಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯವನ್ನು ವ್ಯಾಪಾರವನ್ನಾಗಿಸುತ್ತಿರುವ ವೈಭವದ ಸಾಹಿತ್ಯ ಜಾತ್ರೆಗಳನ್ನು ವಿರೋಸಿ ಪ್ರತಿವರ್ಷದಂತೆ ಈ ವರ್ಷವೂ ಜನನುಡಿಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಭಿಮತ ಮಂಗಳೂರು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News