×
Ad

ನಗರಸಸಭಾ ವ್ಯಾಪ್ತಿಗೆ ರಿಕ್ಷಾ ನಿಲ್ದಾಣವನ್ನು ಸೇರಿಸುವಂತೆ ನಗರಸಭೆಗೆ ಮನವಿ

Update: 2016-11-17 17:07 IST

ಪುತ್ತೂರು, ನ.17: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ರಿಕ್ಷಾಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಬಿಟ್ಟು ಹೋಗಿರುವ ರಿಕ್ಷಾ ನಿಲ್ದಾಣವನ್ನು ಸೇರಿಸುವಂತೆ ಮತ್ತು ಹೊಸ ರಿಕ್ಷಾ ತಂಗುದಾಣ ನೀಡುವ ಕುರಿತು ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಬುಧವಾರ ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡುರವರಿಗೆ ಮನವಿ ನೀಡಲಾಯಿತು.

ಬಳಿಕ ಸಹಾಯಕ ಕಮಿಷನರ್, ಸಂಚಾರ ಪೊಲೀಸ್ ಠಾಣೆ, ಸಹಾಯಕ ಪೊಲೀಸ್ ಅಧೀಕ್ಷಕರಿಗೆ, ಪ್ರಾದೇಶಿಕ ಸಾರಿಗೆ ಇಲಾಖೆಗೂ ಮನವಿ ಸಲ್ಲಿಸಲಾಯಿತು. ದರ್ಬೆ ಮರಿಕೆ ಕ್ಲಿನಿಕ್‌ನಿಂದ ಉಷಾ ಮೆಡಿಕಲ್ ತನಕ, ನೆಹರುನಗರ ಮಂಗಳ ಸ್ಟೋರ್ ಬಳಿ, ಬೊಳುವಾರು ನ್ಯೂ ಆರ್.ಎಚ್. ಸೆಂಟರ್ ಬಳಿ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಬಳಿ ದರ್ಬೆ ಪುಷ್ಪಾಂಜಲಿ ಕಲಾ ಮಂದಿರದ ಬಳಿ ಮತ್ತು ಸ್ಥಳಾವಕಾಶವಿದ್ದಲ್ಲಿ ರಿಕ್ಷಾ ತಂಗುದಾಣಕ್ಕೆ ಅವಕಾಶ ನೀಡಬೇಕಾಗಿ ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಜಯರಾಮ ಕುಲಾಲ್, ಕಾರ್ಯಾಧ್ಯಕ್ಷ ಗಿರೀಶ್ ನಾಯ್ಕ ಸೊರಕೆ, ಕೋಶಾಧಿಕಾರಿ ಜಲೀಲ್ ಮರಿಕೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News