ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಜಾರಿಗೆ ಯತ್ನ: ಕೃಷಿ ಸಚಿವ ವಿ.ಎಸ್. ಸುನೀಲ್ ಕುಮಾರ್

Update: 2016-11-17 18:15 GMT

ಕಾಸರಗೋಡು, ನ.17: ಜಿಲ್ಲೆಯ ಅಡಿಕೆ ಬೆಳಗಾರರಿಗಾಗಿ ವಿಶೇಷ ಪ್ಯಾಕೇಜ್ ಜಾರಿಗೆ ತರಲು ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಕೃಷಿ ಸಚಿವ ವಿ.ಎಸ್. ಸುನೀಲ್ ಕುಮಾರ್ ಹೇಳಿದರು.

     ಅವರು ಗುರುವಾರ ಕೃಷಿ ಅಭಿವೃದ್ಧಿ ಇಲಾಖೆ ಮತ್ತು ಆತ್ಮ ಕಾಸರಗೋಡು ಇದರ ವತಿಯಿಂದ ಕಾಸರಗೋಡು ಯೋಜನಾ ನಿರ್ದೇಶಕರ ಕಟ್ಟಡ, ಸಾವಯವ ಕೃಷಿ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

   ಅಡಿಕೆ ಬೆಳಗಾರರ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆ ಹಾಗೂ ಅನುಷ್ಠಾನಗೊಳಿಸುವ ರೀತಿಯ ಬಗ್ಗೆ ಅಧ್ಯಯನ ನಡೆಸಲಾಗುವುದು. ವರದಿ ಲಭಿಸಿದ ಕೂಡಲೇ ಪ್ಯಾಕೇಜ್ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದರು.

  ಕಾಸರಗೋಡು ಬ್ಲಾಕ್ ಪಂಚಾಯತ್ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್. ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.ಉತ್ತಮ ಕೃಷಿಕ, ಉತ್ತಮ ವಿದ್ಯಾರ್ಥಿ, ತರಕಾರಿ ಕ್ಲಸ್ಟರ್, ಸಂಸ್ಥೆಯ ಮುಖ್ಯಸ್ಥರಾದ ಅಧ್ಯಾಪಕರಿಗಿರುವ ಪ್ರಶಸ್ತಿಯನ್ನು ಸಚಿವರು ವಿತರಿಸಿದರು.

   ಉತ್ತಮ ಕೃಷಿ ಉಪನಿರ್ದೇಶಕ, ಕೃಷಿ ಅಧಿಕಾರಿ, ಕೃಷಿ ಸಹಾಯಕರಿಗಿರುವ ಪುರಸ್ಕಾರವನ್ನು ಶಾಸಕ ಪಿ.ಬಿ. ಅಬ್ದುರ್ರಝಾಕ್, ಸರಕಾರಿ ಸಂಸ್ಥೆಗಿರುವ ಪ್ರಶಸ್ತಿಯನ್ನು ಜಿಪಂ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್ ವಿತರಿಸಿದರು.

ಡಿಸಿ ಕೆ. ಜೀವನ್ ಬಾಬು, ನಗರಸಭಾಧ್ಯಕ್ಷೆ ಬೀಫಾತಿಮ, ಜಿಪಂ ಅಧ್ಯಕ್ಷ ಎ.ಜಿ.ಸಿ. ಬಶೀರ್, ಸಿಪಿಸಿಆರ್‌ಐ ಕೃಷಿ ತಜ್ಞ ಸಿ.ತಂಬಾನ್, ನಗರಸಭಾ ಸದಸ್ಯ ಎ. ರವೀಂದ್ರ, ಡಾ. ಎಂ . ಗೋವಿಂದನ್, ಕೃಷಿ ಅಧಿಕಾರಿ ಪಿ . ಪ್ರದೀಪ್, ಆತ್ಮ ಯೋಜನಾ ನಿರ್ದೇಶಕ ಮಾಯಾದೇವಿ ಕುಂಞಮ್ಮ ಹಾಗೂ ರಾಜಕೀಯ ಪಕ್ಷದ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು

‘ಜಿಲ್ಲೆಯಲ್ಲಿ ಕೆಲಸ ಮಾಡದಿದ್ದರೆ ಉದ್ಯೋಗ ತೊರೆಯಿರಿ’:

   ಕಾಸರಗೋಡು ಜಿಲ್ಲೆಯಲ್ಲಿ ಕೃಷಿ ಕಚೇರಿಗಳಲ್ಲಿ ಅಧಿಕಾರಿ, ನೌಕರರ ಕೊರತೆ ಇದೆ. ಹೊರಜಿಲ್ಲೆಯವರು ಇಲ್ಲಿ ನೇಮಕಾತಿ ಲಭಿಸಿದರೆ ವರ್ಗಾವಣೆ ಪಡೆದು ಸ್ವ-ಜಿಲ್ಲೆಗೆ ಮರಳುತ್ತಾರೆ. ಇಂತಹ ವ್ಯಕ್ತಿಗಳು ಸರಕಾರಿ ಉದ್ಯೋಗ ಬಯಸುವುದು ಬೇಡ, ಸರಕಾರಿ ಉದ್ಯೋಗ ಕ್ಕಿರುವ ಪರೀಕ್ಷೆ ಬರೆಯುವುದು ಬೇಡ.

                                    <ಸುನೀಲ್ ಕುಮಾರ್, ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News