×
Ad

ಯೂನಿಯನ್ ಬ್ಯಾಂಕ್‌ನಿಂದ ಸ್ವಚ್ಛತಾ ಅಭಿಯಾನ

Update: 2016-11-17 23:45 IST

ಮಂಗಳೂರು, ನ.17: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನ.15ರಿಂದ 29ರವರೆಗೆ ‘ಸ್ವಚ್ಛತಾ ಪಕ್ವಾದ’ ಎಂಬ ಹೆಸರಿನ ಸ್ವಚ್ಛತಾ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರಂಗವಾಗಿ ಗುರುವಾರ ಬೆಳಗ್ಗೆ ನಗರದ ಕೆಎಸ್ಸಾರ್ಟಿಸಿ ಪ್ರಧಾನ ಬಸ್ ನಿಲ್ದಾಣದ ಬಳಿಯ ಪರಿಸರವನ್ನು ಬ್ಯಾಂಕ್‌ನ 30 ಸದಸ್ಯರ ತಂಡ ಸ್ವಚ್ಛಗೊಳಿಸಿತು.

 ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥೆ ರಾಜ್ಯಶ್ರೀ ಬಾಗ್ಲಾರಿ ಹಾಗೂ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಕ ವಿವೇಕಾನಂದ ಹೆಗ್ಡೆ ಸ್ವಚ್ಛತಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬ್ಯಾಂಕ್ ಹಾಗೂ ಕೆಎಸ್ಸಾರ್ಟಿಸಿ ಸಿಬ್ಬಂದಿ ಇದರಲ್ಲಿ ಭಾಗವಹಿಸಿದ್ದರು. ಭಾರತದ ಸಾರ್ವಜನಿಕ ರಂಗದ ಬ್ಯಾಂಕ್‌ಗಳ ಪೈಕಿ ಒಂದಾದ ಯೂನಿಯನ್ ಬ್ಯಾಂಕ್ ದೇಶಾದ್ಯಂತ 4,222ಕ್ಕೂ ಶಾಖೆ ಹಾಗೂ 7,000 ಕ್ಕೂ ಅಧಿಕ ಎಟಿಎಂಗಳನ್ನು ಹೊಂದಿದೆ. ದೇಶದ ಜನ ಸಾಮಾನ್ಯರಲ್ಲಿ ನೈರ್ಮಲ್ಯ, ಸ್ವಚ್ಛತೆ ಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News