ಡಿ.24, 25ರಂದು ‘ಜನನುಡಿ’
Update: 2016-11-17 23:56 IST
ಮಂಗಳೂರು, ನ.17: ನಗರದ ಶಾಂತಿಕಿರಣ ಸಭಾಂಗಣದಲ್ಲಿ ಡಿ.24 ಮತ್ತು 25ರಂದು 2 ದಿನಗಳ ಕಾಲ ಜನನುಡಿ ಗೋಷ್ಠಿ ನಡೆಯಲಿದೆ. 2013ರಲ್ಲಿ ಅಭಿಮತ ಮಂಗಳೂರು ಮೊದಲ ಬಾರಿಗೆ ಜನನುಡಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದೀಗ 4ನೆ ವರ್ಷಕ್ಕೆ ಕಾಲಿಟ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳ ಬರಹಗಾರರು, ಚಳವಳಿಗಾರರು ಮತ್ತು ಸಾಹಿತ್ಯಾಸಕ್ತರು ಜನನುಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಭಿಮತ ಮಂಗಳೂರು ತಿಳಿಸಿದೆ.