ಬಡಗನ್ನೂರು, ಕಟ್ಟೆ, ವಿವಾದ, ನಿರೀಕ್ಷಣಾ, ಜಾಮೀನು,
Update: 2016-11-18 00:12 IST
ಪುತ್ತೂರು, ನ.17: ಇಲ್ಲಿನ ಪೆರಿಗೇರಿ ಸಮೀಪದ ಹೊಸನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ನಿರ್ಮಾಣಗೊಂಡಿದ್ದ ಕಟ್ಟೆಯೊಂದಕ್ಕೆ ಹಾನಿ ಉಂಟು ಮಾಡಿ ಮತೀಯ ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ 11 ಮಂದಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಘಟನೆಗೆ ಸಂಬಂಧಿಸಿ ಗ್ರಾಪಂ ಅಧ್ಯಕ್ಷರ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದರು. ವಿವಾದಕ್ಕೆ ಕಾರಣವಾಗಿರುವ ಎರಡೂ ಕಟ್ಟೆಗಳನ್ನು ಪೊಲೀಸ್ ಮತ್ತು ಕಂದಾಯ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ತೆರವುಗೊಳಿಸಲಾಗಿತ್ತು. ಬಂಧನದಲ್ಲಿದ್ದ ಗ್ರಾಪಂ ಅಧ್ಯಕ್ಷ ಕೇಶವ ಸಹಿತ ಮೂವರು ಜಾಮೀನು ಪಡೆದು ಬಿಡುಗಡೆಗೊಂಡಿದ್ದರು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿ ವಿಜಯ್, ರಾಹುಲ್, ಗಿರೀಶ್, ಪವನ್, ವಿಶ್ವನಾಥ, ಅರವಿಂದ, ಜನಾರ್ದನ, ಪ್ರಸಾದ್, ಪ್ರಕಾಶ್, ಸತೀಶ್, ಮೋಹನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ 11 ಮಂದಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿಸಲ್ಲಿಸಿದ್ದು, ನ್ಯಾಯಾಲಯ ಅವರಿಗೆ ಜಾಮೀನು ಮಂಜೂರುಗೊಳಿಸಿದೆ.