×
Ad

ರಿಕ್ಷಾ ಢಿಕ್ಕ್ಕಿ: ಓರ್ವನಿಗೆ ಗಾಯ

Update: 2016-11-18 00:13 IST

ಕಡಬ, ನ.17: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಯೊಂದಕ್ಕೆ ರಿಕ್ಷಾವೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಕೊಡಿಂಬಾಳ ಪೇಟೆಯ ಹಾಲಿನ ಸೊಸೈಟಿ ಸಮೀಪ ಗುರುವಾರ ಸಂಜೆ ನಡೆದಿದೆ.

ಪೆಲತ್ತೋಡಿ ಧರ್ಮಪಾಲ ಗೌಡ ಎಂಬವರು ತನ್ನ ಸ್ಕೂಟಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸಂದರ್ಭ, ಕಡಬದಿಂದ ಕೋಡಿಂಬಾಳದತ್ತ ಬರುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಢಿಕ್ಕಿ ಹೊಡೆದ ಸಂದರ್ಭ ಸ್ಕೂಟಿಯಲ್ಲಿದ್ದ ಧರ್ಮಪಾಲ ಗೌಡರು ನೆಲಕ್ಕುರುಳಿ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ಸ್ಥಳೀಯರು ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಿಕ್ಷಾವನ್ನು ಬೆನ್ನಟ್ಟಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News