×
Ad

ಅಮೆರಿಕದ ಆರ್ ಜಿಎ ಉಪಾಧ್ಯಕ್ಷೆಯಾಗಿ ಭಾರತ ಮೂಲದ ನಿಕ್ಕಿ ಹ್ಯಾಲೆ ಆಯ್ಕೆ

Update: 2016-11-18 09:56 IST

ನ್ಯೂಯಾರ್ಕ್‌, ನ.18: ದಕ್ಷಿಣ ಕರೊಲಿನಾದ ಗವರ್ನರ್ ಆಗಿರುವ ಭಾರತ ಮೂಲದ  ಅಮೆರಿಕದ ಪ್ರಭಾವಿ ರಾಜಕಾರಣಿ  ನಿಕ್ಕಿ ಹ್ಯಾಲೆ ಅವರು ಪ್ರತಿಷ್ಠಿತ ರಿಪಬ್ಲಿಕನ್ ಗವರ್ನರ್ ಗಳ   ಸಂಘದ( ಆರ್ ಜಿಎ )ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ವಿಸ್ಕಾನ್ಸಿನ್‌ ಗವರ್ನರ್ ಸ್ಕಾಟ್ ವಾಲ್ಕರ್ ಆರ‍್ ಜಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 33 ರಾಜ್ಯಗಳು  ರಿಪಬ್ಲಿಕನ್ ಗವರ್ನರ್ ಗಳ ಹಿಡಿತದಲ್ಲಿದೆ.

ನಿಕ್ಕಿ ಹ್ಯಾಲೆ ಅವರು ಅಮೆರಿಕದ ವಿದೇಶಾಂಗ ಸಚಿವೆ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರನ್ನು ಈಗಾಗಲೇ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದೇ ವೇಳೆ ನಿಕ್ಕಿಅವರು ಆರ್ ಜಿಎ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
ಅಧ್ಯಕ್ಷ ಪದವಿಯ ಪಕ್ಷದ ಅಭ್ಯರ್ಥಿಗಾಗಿ ನಡೆದಿದ್ದ ಪ್ರಾಥಮಿಕ ಚುನಾವಣೆಯಲ್ಲಿ ಹ್ಯಾಲೆಯವರು ಮಾರ್ಕೊ ರುಬಿಯೊರನ್ನು ಬೆಂಬಲಿಸಿದ್ದರು. ಆದರೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಅವರು ಟ್ರಂಪ್ ಬೆಂಬಲಿಗರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News