×
Ad

ಭೂಮಿ, ನಿವೇಶನ, ವಸತಿ ಹಕ್ಕಿಗಾಗಿ ಜೈಲ್ ಭರೋ ಚಳವಳಿ

Update: 2016-11-18 17:08 IST

ಉಡುಪಿ, ನ.18: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ಭೂಮಿ, ನಿವೇಶನ ಮತ್ತು ವಸತಿ ಹಕ್ಕಿಗಾಗಿ ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಜೈಲ್ ಭರೋ ಚಳವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಮಣಿಪಾಲ ಟೈಗರ್ ಸರ್ಕಲ್‌ನಿಂದ ಭೂಮಿ ನಮ್ಮ ಹಕ್ಕು ಘೋಷಣೆ ಯೊಂದಿಗೆ ಮೆರವಣಿಗೆ ನಡೆಸಿದ ನಿವೇಶನ ರಹಿತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಧರಣಿ ನಿರತರಲ್ಲಿ ಮನವಿ ಸ್ವೀಕರಿಸಿದರು. ಕೃಷಿಕೂಲಿಕಾರ ಸಂಘದ ಜಿಲ್ಲಾಧ್ಯಕ್ಷ ದಾಸು ಭಂಡಾರಿ ಮನವಿ ವಾಚಿಸಿದರು.

ರಾಜ್ಯದ ಎಲ್ಲಾ ಬಡವರಿಗೆ ಹಿತ್ತಲು ಸಹಿತ ವಸತಿ ಒದಗಿಸಬೇಕು. ಭೂ ಹೀನ, ದಲಿತ, ಆದಿವಾಸಿ, ಇತರ ಬಡವರಿಗೆ ತಲಾ ಐದು ಎಕರೆ ಜಮೀನು ಕೊಡಬೇಕು. ಸರಕಾರಿ ಜಮೀನು ಸಾಗುವಳಿಗೆ ಹಕ್ಕುಪತ್ರ ನೀಡಲು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕು. ಬಡ ಗೇಣಿದಾರರ ರಕ್ಷಣೆಗೆ ಕ್ರಮ ವಹಿಸಬೇಕು. ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ಅರಣ್ಯಹಕ್ಕು ಮಾನ್ಯತಾ ಕಾಯ್ದೆ ತಿದ್ದುಪಡಿ ತರಬೇಕು. ಗುತ್ತಿಗೆ ಮತ್ತು ಕಂಪೆನಿ ಕೃಷಿ ಕೈಬಿಡಬೇಕು. ಬಲವಂತದ ಭೂ ಸ್ವಾಧೀನ ಮಾಡಬಾರದೆಂದು ಮನವಿಯಲ್ಲಿ ಆಗ್ರಹಿಸಲಾಯಿತು. 165 ಎಕರೆ ಭೂಮಿ ಹಂಚಿಕೆ: ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿ ಕಾರಿ, ಜಿಲ್ಲೆಯಾದ್ಯಂತ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ನಿವೇಶನ ರಹಿತ ರಿಗೆ 165ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಇನ್ನು ಹೆಚ್ಚಿನ ಪ್ರಸ್ತಾವನೆಗಳು ಬರುತ್ತಿದ್ದು, ಅವರಿಗೂ ತ್ವರಿತಗತಿಯಲ್ಲಿ ಭೂಮಿ ನೀಡಲು ಕ್ರಮ ತೆಗೆದುಕೊಳ್ಳಲಾಗು ವುದು. ಅರಣ್ಯ ಭೂಮಿ ಹೊರತು ಪಡಿಸಿ ಉಳಿದ ಭೂಮಿಯ ವಿಚಾರವನ್ನು ಇತ್ಯರ್ಥ ಪಡಿಸಲು ಆಯಾ ತಾಲೂಕಿನ ತಹಶೀಲ್ದಾರುಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಅನಧಿಕೃತವಾಗಿ ಸರಕಾರಿ ಭೂಮಿಯಲ್ಲಿ ವಾಸವಾಗಿರುವ ಕುಟುಂಬ ಗಳ 7ಸಾವಿರ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದ್ದು, 18ಸಾವಿರ ಅರ್ಜಿ ಗಳು ಬಾಕಿ ಇವೆ. ಡೀಮ್ಡ್ ಫಾರೆಸ್ಟ್ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿದ್ದು, ಇದರಲ್ಲಿ 34ಸಾವಿರ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್‌ನಿಂದ ಕೈಬಿಡಬೇಕೆಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸ ಲಾಗಿದೆ. ಅಕ್ರಮ ಸಕ್ರಮದಡಿಯಲ್ಲಿ 25500 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 39ಸಾವಿರ ಅರ್ಜಿಗಳು ಬಾಕಿ ಇವೆ ಎಂದು ಅವರು ತಿಳಿಸಿದರು.

ಒಂದು ಗ್ರಾಮದಲ್ಲಿ 100ಗೋವುಗಳಿಗೆ 30 ಎಕರೆ ಗೋಮಾಳ ಭೂಮಿ ಯನ್ನು ಮೀಸಲಿರಿಸಿದ್ದು, ಅದಕ್ಕಿಂತ ಹೆಚ್ಚಿನ ಗೋಮಾಳ ಭೂಮಿ ಇದ್ದರೆ ಅದನ್ನು ಹಂಚಲು ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಚರ್ಚಿ ಸಲು ಸಂಘಟನೆಯ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಜಂಟಿ ಸಭೆ ಯನ್ನು ಒಂದು ತಿಂಗಳೊಳಗೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಗೋವುಗಳಿಗಿಂತ ಕೀಳು: ಬಳಿಕ ಮಾತನಾಡಿದ ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, 100 ಗೋವುಗಳಿಗೆ 30ಎಕರೆ ಜಾಗ ನೀಡುವ ಸರಕಾರಕ್ಕೆ ಜಾಗ ಇಲ್ಲದೆ ಬೀದಿ ಯಲ್ಲಿ ಬಿದ್ದಿರುವ ಜನರು ಕಾಣುತ್ತಿಲ್ಲ. ಇವರ ಪ್ರಕಾರ ಮನುಷ್ಯರು ಗೋವಿ ಗಿಂತ ಕೀಳು ಎಂದು ಟೀಕಿಸಿದರು. ಜಿಲ್ಲಾಧಿಕಾರಿಗಳು ಒಂದು ತಿಂಗಳೊಳಗೆ ಜಂಟಿ ಸಭೆಯನ್ನು ಕರೆದು ಸಮಸ್ಯೆ ಪರಿಹರಿಸದಿದ್ದಲ್ಲಿ ಮತ್ತೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಳಿಕ ಧರಣಿಯನ್ನು ಮುಂದುವರೆಸಿದ ನೂರಾರು ಮಂದಿ ಕಾರ್ಯಕರ್ತ ರನ್ನು ಪೊಲೀಸರು ಬಂಧಿಸಿ, ಸಂಜೆ ವೇಳೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ವಂಕಟೇಶ್ ಕೋಣಿ, ರಾಜ್ಯ ಸಮಿತಿ ಸದಸ್ಯ ಕವಿರಾಜ್ ಎಸ್., ಸಿಐಟಿಯು ಜಿಲ್ಲಾಧ್ಯಕ್ಷ ಪಿ.ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ರೈತ ಸಂಘದ ಮಹಾ ಬಲ ವಡೇರಹೋಬಳಿ, ಉಮೇಶ್ ಕುಂದರ್, ನಳಿನಿ, ಲಕ್ಷ್ಮಣ್ ಕೆ., ಸುಜಾತ ಶೆಟ್ಟಿ, ಸುರೇಶ್ ಕಲ್ಲಗಾರ್, ಎಚ್.ನರಸಿಂಹ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News