ಮುಲ್ಕಾಜೆಮಾಡ: ಶ್ರೀ ಉಳ್ಳಾಲ್ತಿ ಉಳ್ಳಾಕುಲು ದೈವಸ್ಥಾನಕ್ಕೆ ಶಿಲಾನ್ಯಾಸ
ಬಂಟ್ವಾಳ, ನ. 18: ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡದಲ್ಲಿರುವ ಶ್ರೀ ಉಳ್ಳಾಲ್ತಿ ಉಳ್ಳಾಕುಲು ದೈವಸ್ಥಾನ ಹಾಗೂ ಪರಿವಾರ ದೈವಗಳ ಸಾನಿಧ್ಯಗಳನ್ನು ಪುನರ್ ನಿಮಾಣ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು.
ನಂತರ ನಡೆದ ಧಾರ್ಮಿಕ ಸಭೆಯನ್ನು ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ಜಪ್ಪಿನಮೊಗರು ಶ್ರೀ ನವದುರ್ಗಾ ಕ್ಷೇತ್ರದ ಆಡಳಿತ ಧರ್ಮದರ್ಶಿ ಯೋಗೀಶ್ ಭಟ್ ಚಿಂತನೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಶ್ರೀ ಕ್ಷೇತ್ರ ಕಾರಿಂಜದ ಆಡಳಿತ ಧರ್ಮದರ್ಶಿ ಪಿ.ಜಿನರಾಜ ಆರಿಗ, ಉದ್ಯಮಿಗಳಾದ ರೋಹಿನಾಥ್ ಪಾದೆ, ಸಂಜೀವ ಪೂಜಾರಿ ಗುರುಕೃಪ ಮಾತನಾಡಿ ಕ್ಷೇತ್ರವು ಶೀರ್ಘದಲ್ಲಿ ನಿರ್ಮಾಣಗೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು. ಜಿಲ್ಲಾ ಪಂಚಾಐತು ಸದಸ್ಯ, ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಕಕ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಉಧ್ಯಮಿಗಳಾದ ವಾಸುದೇವ ಭಟ್, ಧೀರಜ್ ನಾಯಕ್, ಗ್ರಾಮಾಭಿವೃದ್ಧಿ ಯೋಜನೆ ಯೋನಾಧಿಕಾರಿ ಸುನೀತಾ ನಾಯಕ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ತಾಲೂಕು ಪಂಚಾಯತು ಸದಸ್ಯೆ ಸ್ವಪ್ನ ವಿಶ್ವನಾಥ ಪೂಜಾರಿ, ಮಾಜಿ ಸದಸ್ಯ ಸಂಪತ್ ಕುಮಾರ್ ಶೆಟ್ಟಿ, ಪಡ್ಡಾಯುರು ರಘು ಶೆಟ್ಟಿ, ಮೋನಪ್ಪ ಪೂಜಾರಿ ವಾರಂಬು, ತಾರಾನಾಥ ಬಂಗೇರ ಸಿದ್ಧಾಜೆ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಆನಂದ ಆಳ್ವ ಬತ್ತನಾಡಿ ಪ್ರಸ್ತಾಪಿಸಿದರು. ಗೌರವಾಧ್ಯಕ್ಷ ಗಣಪತಿ ಮುಚ್ಚಿನ್ನಾಯ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.