ಕೊಲ್ಯ: ಬಸ್ಸಿಗೆ ಟ್ಯಾಂಕರ್ ಢಿಕ್ಕಿ - ಮಹಿಳೆಗೆ ಗಾಯ

Update: 2016-11-18 13:47 GMT

ಉಳ್ಳಾಲ,ನ.18: ರಾ.ಹೆ.66ರ ಕೊಲ್ಯದಲ್ಲಿ ನಗರ ಸಾರಿಗೆ ಬಸ್ಸಿಗೆ ಪೆಟ್ರೋಲ್ ತುಂಬಿದ ಟ್ಯಾಂಕರ್ ಒಂದು ವೇಗವಾಗಿ ಬಂದು ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಕೈ ಮುರಿತ್ತಕ್ಕೊಳಗಾದ ಘಟನೆ ಶುಕ್ರವಾರ ನಡೆದಿದೆ.

  ಕುಂಪಲದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ 44 ರೂಟ್ ನಂಬರಿನ ದುರ್ಗಾಂಭ ಟ್ರಾವೆಲ್ಸ್ ಕೊಲ್ಯದಲ್ಲಿ ಮಂಗಳೂರಿನ ಕಡೆ ತೆರಳಲು ಚತುಷ್ಪಥ ಹೆದ್ದಾರಿಯಲ್ಲಿ ರಸ್ತೆ ಕ್ರಾಸ್ ಮಾಡುತ್ತಿರುವ ಸಂಧರ್ಭ ಹಿಂದಿನಿಂದಲೇ ಕೋಟೆಕಾರಿನಲ್ಲಿ  ಪೆಟ್ರೋಲ್ ತುಂಬಲು ಧಾವಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡವಾಗಿ ನಿಂತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿದೆ.

ಈ ಸಂದರ್ಭ ಢಿಕ್ಕಿಯ ಪರಿಣಾಮ ಬಸ್ಸಿನಲ್ಲಿ ಚಾಲಕನ ಹಿಂದಿನ ಮೂರನೇ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಕುಂಪಲ ನಿವಾಸಿ ಶೋಭಾ(45)ರವರ ಬಲಗೈ ಮುರಿತಕ್ಕೊಳಗಾಗಿದ್ದು ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಶೋಭಾ ಅವರು ಬಲ್ಮಠ ಅಂಚೆ ಕಛೇರಿಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ತೆರಳುವಾಗ ದುರ್ಘಟನೆ ನಡೆದಿದೆ. ಅಪಘಾತ ಬೀಕರವಾಗಿ ನಡೆದಿದ್ದರೂ ಅದೃಷ್ಟವಶಾತ್ ದೊಡ್ಡ ಪ್ರಮಾಣದ ಅನಾಹುತಗಳು ಸಂಭವಿಸಿಲ್ಲ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News