×
Ad

ಇಂದಿನಿಂದ ‘ಭಾರತದ ಉತ್ಕೃಷ್ಟ ಸಾರಿಗೆ ಮತ್ತು ಪ್ರವಾಸೋದ್ಯಮದ ಪ್ರದರ್ಶನ’

Update: 2016-11-18 20:04 IST

ಮಂಗಳೂರು, ನ. 18: ಇಂಡಿಯಾ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್ (ಐಐಟಿಇ) ವತಿಯಿಂದ ನಗರದ ಟಿ.ವಿ.ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಮೂರು ದಿನಗಳ ಏರ್ಪಡಿಸಲಾದ ಭಾರತದ ಉತ್ಕೃಷ್ಟ ಸಾರಿಗೆ ಮತ್ತು ಪ್ರವಾಸೋದ್ಯಮದ ಪ್ರದರ್ಶನ ಇಂದು ಉದ್ಘಾಟನೆಗೊಂಡಿತು.

 ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗದ ಮಹಾಪ್ರಬಂಧಕಿ ಸ್ವಾತಿ ಕಾಳೆ ದೀಪ ಬೆಳಗಿಸಿ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಐಐಟಿಇ ಬೆಂಗಳೂರು ಇದರ ನಿರ್ದೇಶಕ ಅನುರಾಗ್ ಗುಪ್ತ ಮತ್ತಿತರರು ಉಪಸ್ಥಿತರಿದ್ದರು. ಪ್ರದರ್ಶನವು ನವೆಂಬರ್ 19ರಿಂದ 20ರವರೆಗೆ ನಡೆಯಲಿದೆ. ಸಾರಿಗೆ, ಪ್ರವಾಸ, ರೈಲ್ವೇಸ್, ಆತಿಥ್ಯ ಮತ್ತಿತರ ವಿಷಯಗಳಿಗೆ ಪೂರಕವಾಗಿ ಜನರಿಗೆ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ಒದಗಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News