×
Ad

ಸಿನಿಮಾದ ಹೆಸರೇ ಹೆಚ್ಚು ಅರ್ಥಪೂರ್ಣ : ದುರ್ಗಾ ಪ್ರಸಾದ್ ರೈ

Update: 2016-11-18 20:43 IST

ಪುತ್ತೂರು,ನ.18 : ಸಮಾಜದ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ "ಪನೊಡಾ ಬೊಡ್ಚಾ " (ಹೇಳ್ಬೇಕಾ ಬೇಡವೇ ) ಎನ್ನುವುದು ವಾಸ್ತವಿಕವಾಗಿ ಹೆಚ್ಚು ಅರ್ಥಪೂರ್ಣ ಎಂದನಿಸುತ್ತಿದೆ. ಸತ್ಯ ಹೇಳಿದರೆ ತಪ್ಪು ಎಂದಾಗುತ್ತದೆ. ಹೇಳದಿದ್ದರೆ ಸಮಸ್ಯೆ ಆಗುತ್ತದೆ ಎಂದು ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಹೇಳಿದರು. ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಶುಕ್ರವಾರ ನಡೆದ "ಪನೊಡಾ ಬೊಡ್ಚಾ " ತುಳು ಚಲನಚಿತ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು. ರಂಗಭೂಮಿ, ತುಳು ಚಿತ್ರದಲ್ಲಿ ಮಿಂಚುತ್ತಿರುವ ಮಂದಾರ ಸುಂದರ ರೈ ಅವರ ಪ್ರತಿಭೆ ಈ ತುಳು ಚಲನಚಿತ್ರದಿಂದಾಗಿ ದೇಶ ವಿದೇಶಗಳಲ್ಲಿ ಅನಾವರಣಗೊಳ್ಳುವಂತಾಗಿದೆ ಎಂದ ಅವರು ಹೇಳಿದರು. ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಅವರು ಉದ್ಘಾಟಿಸಿದರು. ಈ ಚಿತ್ರ ಎಲ್ಲೆಡೆ ಪಸರಿಸಿ ಜನತೆಯ ಮೆಚ್ಚುಗೆ ಗಳಿಸುವ ಜೊತೆಗೆ ಹೆಚ್ಚು ಆದಾಯ ತರಲಿ ಎಂದು ಅವರು ಹಾರೈಸಿದರು. ಉದ್ಯಮಿ ಪುರಂದರ ರೈ ಮಿತ್ರಂಪಾಡಿ ಅವರು ಮಾತನಾಡಿ ಮಂದಾರ ಸುಂದರ ರೈ ಅವರ ಒಂದೂವರೆ ವರ್ಷದ ತಪಸ್ಸಿನ ಫಲವಾಗಿ ಈ ಚಲನಚಿತ್ರ ಬಿಡುಗಡೆಯಾಗಿದ್ದು, ಬಹಳಷ್ಟು ಕಷ್ಟ ಪಟ್ಟು ಈ ಕೆಲಸ ಮಾಡಿದ್ದಾರೆ. ಅವರ ಭವಿಷ್ಯ ಇದರಲ್ಲಿ ಅಡಗಿರುವುದರಿಂದ ನಮ್ಮ ಯುವಕರು ಮಾಡಿರುವ ಸಾಧನೆಯನ್ನು ಎಲ್ಲರ ಮನೆಗೆ ,ಮನಸ್ಸಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರು. ಉದ್ಯಮಿ ಕರುಣಾಕರ ರೈ, ಬಿಜೆಪಿ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ, ಚಿಕ್ಕಪ್ಪ ನಾಕ್ ಅವರು ಮಾತನಾಡಿ ಶುಭ ಹಾರೈಸಿದರು. ಅರುಣಾ ಚಿತ್ರಮಂದಿರದ ಮಾಲಕ ರಮಾನಂದ ನಾಯಕ್, ಎಪಿಎಂಸಿ ಮಾಜಿ ಅಧ್ಯಕ್ಷ ಅಮ್ಮಣ್ಣ ರೈ ಪಾಪೆಮಜಲು, ಪ್ರಕಾಶ್ಚಂದ್ರ ರೈ ಕೈಕಾರ, ವಿನೋದ್‌ಕುಮಾರ್ ಶೆಟ್ಟಿ ಅರಿಯಡ್ಕ, ಪುತ್ತೂರು ತುಳು ಕೂಟದ ಅಧ್ಯಕ್ಷ ವಿಜಯಕುಮಾರ್ ಹೆಬ್ಬಾರಬೈಲು, ಶರತ್‌ಕುಮಾರ್ ರೈ,ಕಲಾವಿದ ಚಂದ್ರಹಾಸ ರೈ ಮಾಣಿ ಮತ್ತಿತರರು ಇದ್ದರು, ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಅವರು ಸ್ವಾಗತಿಸಿ ,ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News