ಅಶ್ಲೀಲ ಚಿತ್ರ ಕಳುಹಿಸಿ ಬಾಲಕಿಗೆ ಕಿರುಕುಳ: ಆರೋಪಿ ಸೆರೆ
Update: 2016-11-18 21:17 IST
ಬೆಳ್ತಂಗಡಿ, ನ.18: ನೆಲ್ಯಾಡಿಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ಬಾಲಕಿ ಮೊಬೈಲ್‌ಗೆ ಕರೆಮಾಡಿ ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡಿದ್ದಲ್ಲದೆ, ಯಾವುದೋ ನಗ್ನ ಚಿತ್ರಕ್ಕೆ ಬಾಲಕಿಯ ಮುಖವನ್ನು ಅಂಟಿಸಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡಿದ ಆರೋಪಿಯನ್ನು ಧರ್ಮಸ್ಥಳ ಪೋಲೀಸರು ಬಂಧಿಸಿದ್ದಾರೆ. ಅರಸಿನಮಕ್ಕಿ ನೆಕ್ಯರಕಂಡ ನಿವಾಸಿ ಮಹೇಶ್ ಎನ್.(20) ಬಂಧಿತ ಆರೋಪಿ. ಈತ ಕಾಲೇಜಿನಲ್ಲಿ ಕಲಿಯುತ್ತಿದ್ದ ವೇಳೆ ಬಾಲಕಿಯ ಪರಿಚಯ ಮಾಡಿಕೊಂಡಿದ್ದು, ಬಳಿಕ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಬಾಲಕಿ ಹಾಗೂ ಮನೆಯವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೋಲೀಸರು ಬೆಂಗಳೂರಿನಲ್ಲಿದ್ದ ಈತನನ್ನು ಮೊಬೈಲ್ ಟವರ್ ಆಧರಿಸಿ ಪತ್ತೆ ಹಚ್ಚಿದ್ದಾರೆ. ಆರೋಪಿಯ ವಿರುದ್ಧ ಪೊಸ್ಕೊ ಹಾಗೂ ಐಟಿ ಆಕ್ಟ್‌ನಂತೆ ಹಾಗೂ ಐಪಿಸಿ ಸೆಕ್ಷನ್‌ನಂತೆ ಪ್ರಕರಣ ದಾಖಲಿಸಿದ್ದಾರೆ.