×
Ad

ಕಿಂಡಿ ಅಣೆಕಟ್ಟಿಗೆ ಹಾನಿ: 50 ಸಾವಿರ ನಷ್ಟ

Update: 2016-11-18 21:25 IST

ಕೊಲ್ಲೂರು, ನ.18: ಚಿತ್ತೂರು ಗ್ರಾಮದ ನ್ಯಾಗಳಮನೆ ಸಮೀಪ ಬ್ರಹ್ಮ ಕುಂಡ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿಗೆ ಅಳವಡಿಸಿದ್ದ ಫೈಬರ್ ಹಲಗೆಯನ್ನು ನ.16ರಂದು ಸಂಜೆ 6:30ರ ಸುಮಾರಿಗೆ ಹಾನಿಗೈದು ಸಾವಿರಾರು ರೂ. ನಷ್ಟ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ.

 ಸ್ಥಳೀಯ ನಿವಾಸಿ ಸುಕುಮಾರ ಶೆಟ್ಟಿ ಎಂಬವರು ದುರುದ್ದೇಶದಿಂದ ಕಿಂಡಿ ಅಣೆಕಟ್ಟಿಗೆ ಅಳವಡಿಸಿದ್ದ ಫೈಬರ್ ಹಲಗೆಯನ್ನು ಹಾನಿ ಮಾಡಿದ್ದು, ಇದರಿಂದ ಅಣೆಕಟ್ಟಿನಲ್ಲಿ ಶೇಖರಣೆಯಾದ ನೀರು ಎಲ್ಲವೂ ಪೋಲಾಗಿದೆ. ಇವರು ಈ ಹಿಂದೆಯೂ ಕೂಡ ಫೈಬರ್ ಹಲಗೆಯನ್ನು ಹಾನಿ ಮಾಡಲು ಪ್ರಯತ್ನಿಸಿದ್ದರು. ಇದೀಗ ಅವರು ಸಾರ್ವಜನಿಕ ಸೊತ್ತನ್ನು ನಾಶಪಡಿಸಿ 50,000ರೂ. ನಷ್ಟ ಉಂಟು ಮಾಡಿರುವುದಾಗಿ ಉಪಗುತ್ತಿಗೆದಾರ ವಿಶ್ವನಾಥ ಶೆಟ್ಟಿ ನೀಡಿರುವ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News